ಕಾಸರಗೋಡು : ಮಂಜೇಶ್ವರ ಉಪಚುನಾವಣೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ ಕೆ ಶ್ರೀಕಾಂತ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಒಳ ಒಪ್ಪಂಧ ರಾಜಕೀಯ ಮತ್ತು ಮುಸ್ಲಿಂ ಲೀಗ್ ಮತ್ತು ಸಿಪಿಎಂನ ಸಂಬಂಧದ ವಿರುದ್ಧ ಮಂಜೇಶ್ವರದ ಜನರು ಉಪಚುನಾವಣೆಯಲ್ಲಿ ಎನ್ .ಡಿ.ಎ ಪರವಾಗಿ ತೀರ್ಪು ಬರೆಯುತ್ತಾರೆ ಎಂದು ಅವರು ಹೇಳಿದರು. ಪಿಣರಾಯಿ ಸರ್ಕಾರದ ಜನ ವಿರೋಧಿ ಆಡಳಿತ ಮತ್ತು ವಿರೋಧಪಕ್ಷ ಯುಡಿಎಫ್ ನಡೆಸಿದ ಕಾರ್ಯಗಳನ್ನು ಈ ಚುನಾವಣೆಯಲ್ಲಿ ಜನರು ಮೌಲ್ಯಮಾಪನ ಮಾಡಲಿದ್ದಾರೆ ಎಂದು ಅವರು ಹೇಳಿದರು.
ನಕಲಿ ಮತದಾನದ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಮುಸ್ಲಿಂ ಲೀಗಿನ ಕುತಂತ್ರಕ್ಕೆ ಜನತೆಯು ತಕ್ಕ ಪಾಠಕಲಿಸಲಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ. ನಕಲಿ ಮತದಾನದ ವಂಚನೆ ವಿರುದ್ಧ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ಪರಿಗಣಿಸದೆ ದೀರ್ಘ ಕಾಲ ವಿಸ್ತರಿಸಿದ್ದ ಮುಸ್ಲಿಂ ಲೀಗ್ ಮತ್ತು ಸಿಪಿಎಂ ನ ವಿರುದ್ಧವಾಗಿ ಜನರ ನ್ಯಾಯಾಲಯವು ತೀರ್ಪು ನೀಡಲಿದೆ ಎಂದು ಅವರು ಹೇಳಿದರು.


