ಮಂಜೇಶ್ವರ: ಪ್ರಾಧ್ಯಾಪಕ, ಸಾಹಿತಿ ಟಿ.ಎ.ಎನ್.ಖಂಡಿಗೆ ಅವರು ಓದುವ ವ್ಯಸನಿಗಳಿಗಾಗಿ ಆಯೋಜಿಸುತ್ತಿರುವ ಈಹೊತ್ತಿಗೆ-ಈ ಹೊತ್ತಗೆ ಕಾರ್ಯಕ್ರಮದ 11ನೇ ಸರಣಿ ಇಂದು ಅಪರಾಹ್ನ 3.30 ರಿಂದ ಕಣ್ವತೀರ್ಥದಲ್ಲಿರುವ ಟಿ.ಎ,ಎನ್ ಖಂಡಿಗೆ ಅವರ ಸ್ವಗೃಹದಲ್ಲಿ ನಡೆಯಲಿದೆ.
ಖ್ಯಾತ ನಾಟಕಕಾರ ಗಿರೀಶ ಕಾರ್ನಾಡು ಅವರ ಆಡಾಡತ ಆಯುಷ್ಯ ಆತ್ಮಕಥಾ ಕೃತಿಯ ವಿಸ್ಕøತ ಸಂವಾದ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ. ಚಿಂತಕ ಡಾ.ಉದಯ ಮಂಜುನಾಥ್ ಅವರು ಕೃತಿ ಸ್ಪಂದನ ನಡೆಸುವರು. ಟಿ.ಎ.ಎನ್ ಖಂಡಿಗೆ ಹಾಗೂ ಕವಿತಾ ಟಿ.ಎ.ಎನ್ ಖಂಡಿಗೆ ಕಾರ್ಯಕ್ರಮ ಸಂಯೋಜಿಸಿರುವರು. ಸಾಹಿತ್ಯ, ನಾಡು-ನುಡಿಯ ಪ್ರೇಮಿಗಳಿಗೆ ಮುಕ್ತ ಅವಕಾಶವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುವರು.


