ಮಂಜೇಶ್ವರ: ಲೋಕಕಲ್ಯಾಣಥ9, ಸರ್ವ ಸಮ್ಮತಿಯೊಂದಿಗೆ ಅತೀ ಶೀಘ್ರ ಪುಣ್ಯಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ಹಾಗೂ ಶ್ರೀ ಶಬರಿಮಲೆಯ ಪಾವಿತ್ರತೆಗೆ ಯಾವುದೇ ಚ್ಯುತಿ ಬಾರದಂತೆ ಶುಭ ಸಂಕಲ್ಪದೊಂದಿಗೆ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಿಂದ ಸೆ. 18 ರಂದು ಅಖಂಡ ಪಾದಯಾತ್ರೆ ಸಂಘಟಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ಅಯ್ಯಪ್ಪ ವ್ರತಧಾರಿ ರಾಜಪ್ಪ ಸಪಲಿಗ ಕುಪ್ಪೆಪದವು, ಚರಣ್ ರಾಜ್ ಕುಲಶೇಖರ, ಮಿಥುನ್ ಚಿತ್ರಾಪುರ ಹಾಗೂ ಶಶಿಕುಮಾರ್ ಕಕ್ಕಿಂಜೆ ಇವರು ಸುಮಾರು 3000 ಕಿಮೀ ದೀಘ9ಪಾದಯಾತ್ರೆ ಕೈಗೊಳ್ಳಲಿರುವರು.
ಪೂರ್ವಭಾವಿಯಾಗಿ ನಿನ್ನೆ ಮುಂಜಾನೆ ಈ ಕಠೋರ ತಪಸ್ಸು ಹೊತ್ತು ಪಾದಯಾತ್ರೆ ಗೈಯಲಿರುವವರನ್ನು ವಿಶ್ವ ಹಿಂದು ಪರಿಷತ್ತಿನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಕಾಸರಗೋಡಿನ ಬಿಜೆಪಿ ನೇತಾರ ಹರಿಶ್ಚಂದ್ರ ಮಂಜೇಶ್ವರ, ಗುರುಪುರ ಕೈಕಂಬ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಹರೀಶ್ ಶೆಟ್ಟಿ ಪೊಳಲಿ, ಮಹಾಬಲ ಗಂಜಿಮಠ, ರಾಜು ಕೃಷ್ಣನಗರ ತೊಕ್ಕೋಟು, ಗುರುಸ್ವಾಮಿ ರಾಜೇಶ್ ಕೊಟ್ಟಾರಿ ನಾರ್ಲ ಹಾಗೂ ಕಣ್ಣು ತೆರೆದೆಯಾ ಅಯ್ಯಪ್ಪ ಕ್ಷೇತ್ರ ಶಾಂತಿಗಿರಿ ತೊಡರುವಿನ ಅಶೋಕ್ ಗುರು ಸ್ವಾಮಿ ಶುಭ ಹಾರೈಕೆಗಳೊಂದಿಗೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಬೀಳ್ಕೂಟರು.


