ಬದಿಯಡ್ಕ: ಓಣಂ ಹಬ್ಬವನ್ನು ಕೇರಳದಲ್ಲಿ ಜಾತಿಮತ ಬೇಧವಿಲ್ಲದೆ ಎಲ್ಲರೂ ಆಚರಿಸುತ್ತಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯವನ್ನು ತರುವಲ್ಲಿ ಹಬ್ಬದ ಆಚರಣೆ ಪ್ರಧಾನ ಪಾತ್ರವಹಿಸುತ್ತದೆ. ಓಣಂ ಹಬ್ಬದ ದೀಪ ಎಲ್ಲರ ಮನೆಯಲ್ಲೂ ಬೆಳಗಬೇಕು ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶಂಕರ ಡಿ. ಅಭಿಪ್ರಾಯಪಟ್ಟರು.
ಬದಿಯಡ್ಕ ಕೃಷಿಭವನದ ನೇತೃತ್ವದಲ್ಲಿ ಮಾಡತ್ತಡ್ಕ ಕೊರಗ ಕಾಲನಿಯವರಿಗೆ ನೀಡುವ ಓಣಂ ತರಕಾರಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಬದಿಯಡ್ಕ ಇಕೋಶೋಪ್‍ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸಹಾಯಕ ಕೃಷಿ ಅಧಿಕಾರಿ ಆನಂದ ಕೆ. ಮುಖ್ಯ ಅತಿಥಿಗಳಾಗಿ ಮಾತನಾಡಿ ಮಾಡತ್ತಡ್ಕ ಕೊರಗ ಕಾಲನಿಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಲನಿ ವಾಸಿಗಳೂ ಓಣಂ ಸಂಭ್ರಮಾಚರಣೆಯಿಂದ ವಂಚಿತರಾಗಬಾರದೆಂಬ ಉದ್ದೇಶವನ್ನಿಟ್ಟುಕೊಂಡು ತರಕಾರಿ ಕಿಟ್ ವಿತರಿಸಲಾಗುತ್ತಿದೆ ಎಂದರು. ಬದಿಯಡ್ಕ ಕೃಷಿಭವನದ ಅಧಿಕಾರಿ ಮೀರಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಕೃಷಿ ಅಧಿಕಾರಿಗಳಾದ ಜಯರಾಮ, ಮಣಿಕಂಠನ್, ಕರುಣಾಕರನ್ ಜೊತೆಗಿದ್ದರು.