ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಗಳು ಶ್ರೀಮಠದಲ್ಲಿ ಜುಲೈ 25 ರಿಂದ ಆರಂಭಗೊಂಡು ಸೆ. 14ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳಿಂದ ಭಕ್ತಿಸಂಗೀತಾರ್ಚನೆ ನಡೆಯಿತು. ಹಿಮ್ಮೇಳದಲ್ಲಿ ಟಿ.ಜಿ.ಗೋಪಾಲಕೃಷ್ಣನ್(ವಯಲಿನ್), ಎಂ.ಕೆ.ಪ್ರಾಣೇಶ್(ಕೊಳಲು), ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ (ಮೃದಂಗ), ಟ್ರಿಚ್ಚಿ ಕೆ.ಆರ್.ಕುಮಾರ್ (ಘಟಂ), ದೇವರಾಜ್ ಆಚಾರ್(ಮ್ಯಾಂಡಲಿನ್) ನಲ್ಲಿ ಸಹಕರಿಸಿದರು. ಸೋಮವಾರ ಸಂಜೆ ಗೀತಾ ವಿಹಾರ ಕಾಸರಗೋಡು ತಂಡದವರಿಂದ ಭಜನ್ ಸಂಧ್ಯಾ ನಡೆಯಿತು. ಚಾತುರ್ಮಾಸ್ಯದ ಅಂಗವಾಗಿ ಪ್ರತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಪೂಜಾ ಸೇವೆಗಳು, ವೈದಿಕ ಕಾರ್ಯಕ್ರಮಗಳೂ ನಡೆಯುತ್ತಿವೆ.