ಕಾಸರಗೋಡು: ಕಾಸರಗೋಡು ಪಬ್ಲಿಕ್ ಸರ್ವೀಸ್ ಸಹಕಾರಿ ಸಂಘ ರಿಕ್ರಿಯೇಶನ್ ಕ್ಲಬ್‍ನ ಆಶ್ರಯದಲ್ಲಿ ಓಣಂ ಆಚರಣೆಯ ಸಂದರ್ಭ ಖ್ಯಾತ ಸಂಗೀತ ಕಲಾವಿದೆ ವಿದುಷಿ ಉಷಾ ಈಶ್ವರ ಭಟ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ವಿವಿಧ ಕಾರ್ಯಕ್ರಮಗಳೊಂದಿಗೆ ಓಣಂ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉಷಾ ಈಶ್ವರ ಭಟ್ ಅವರು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಟಿ.ಕೆ.ರಾಜಶೇಖರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಘದ ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಕವಿ ಎಂ.ಪಿ.ಜಿಲ್‍ಜಿಲ್, ಪಿ.ಕೆ.ಅಹಮ್ಮದ್ ಹುಸೈನ್, ಕೆ.ರವೀಂದ್ರನ್, ಬಿ.ರಾಧಾಕೃಷ್ಣನ್, ಟಿ.ವಿ.ಸಿನಿ ಮೊದಲಾದವರು ಮಾತನಾಡಿದರು.
ಪಿ.ವಿನಯ ಕುಮಾರ್, ಪ್ರಶಾಂತ್ ಬಾವಿಕರೆ, ವಿ.ಬಿಂದು, ಎಂ.ವೇದಾವತಿ, ಟಿ.ಮಹೇಶ್, ಕೆ.ಸುಮತಿ, ಪಿ.ಜಿ.ರಾಜೇಶ್, ಸಿ.ಆದಿರ, ಸಿ.ಅನಘ, ಕೆ.ಬೇಬಿ ಮೊದಲಾದವರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಿದರು. ಪೂಕಳಂ ರಚಿಸಲಾಗಿತ್ತು. ರವೀಂದ್ರನ್ ಪೆರುಂಬಳ ಸ್ವಾಗತಿಸಿ, ವಂದಿಸಿದರು.