ಮಂಜೇಶ್ವರ: ಕೊಡ್ಲಮೊಗರು ಅಡೆಕಳಕಟ್ಟೆಯ ಫ್ರೆಂಡ್ಸ್ ಕ್ಲಬ್‍ನ 9 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗೆ ಮುಕ್ಕಾಲ್ದಿ ಮಲರಾಯ ಮಹಮ್ಮಾಯಿ ದೈವಸ್ಥಾನ ಬೋಳ್ನದ ರಾಘವ ಶೆಟ್ಟಿಗಾರ್ ಬೋಳ್ನ ಅವರು ಚಾಲನೆ ನೀಡಿ ನೀಡಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್‍ನ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಅಡೆಕಳಕಟ್ಟೆ ವಹಿಸಿದ್ದರು.
ಧಾರ್ಮಿಕ ಭಾಷಣ ಮಾಡಿದ ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಸಂಸ್ಕಾರ, ಸಂಪ್ರದಾಯಗಳು ನಮ್ಮ ಸಂಸ್ಕøತಿಯನ್ನು ಎತ್ತಿ ತೋರಿಸುವುದು. ಅದರಲ್ಲಿ ನಿಷ್ಠೆ ತೋರುವವರಿಗೆ ಧರ್ಮ ರಕ್ಷಣೆ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ ಎಂ.ಕೆ. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ರಂಗದಲ್ಲಿದ್ದುಕೊಂಡು ವಿವಿಧ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುವುದರ ಜೊತೆಗೆ ಅನಾಥ, ನಿರ್ಗತಿಕರ ಆಶ್ರಮ ನಡೆಸಿ ಸೇವೆಯನ್ನು ಸಲ್ಲಿಸುತ್ತಿರುವ ಡಾ.ಉದಯ ಕುಮಾರ್ ನೂಜಿ ಹಾಗೂ ಡಾ.ಶಾರದಾ ಉದಯ ಕುಮಾರ್ ಅವರಿಗೆ ಕ್ಲಬ್ಬಿನ ವತಿಯಿಂದ ಗೌರವದ ಸಮ್ಮಾನವನ್ನು ನೀಡಲಾಯಿತು. ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಕೇಶವ ಪೆÇಯ್ಯತ್ತಬೈಲ್ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಫ್ರೆಂಡ್ಸ್ ಕ್ಲಬ್‍ನ ಜೊತೆ ಕಾರ್ಯದರ್ಶಿ ರೂಪರಾಣಿ ಅಡೆಕಳಕಟ್ಟೆ ವರದಿ ವಾಚಿಸಿದರು. ಫ್ರೆಂಡ್ಸ್ ಕ್ಲಬ್‍ನ ಸದಸ್ಯ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಸದಸ್ಯೆ ದೀಕ್ಷಿತ ಅಡೆಕಳಕಟ್ಟೆ ವಂದಿಸಿದರು. ಶ್ರೀಶಾನ್ ಕಾರ್ಯಕ್ರಮ ನಿರೂಪಿಸಿದರು.