ಉಪ್ಪಳ: ನೆಲ್ಲಿತ್ತರದ ರಾಮದಾಸ ಸ್ಮಾರಕ ಸರಸ್ವತೀ ವಿದ್ಯಾಮಂದಿರದಲ್ಲಿ ನಡೆದ ಭಾರತೀಯ ವಿದ್ಯಾನಿಕೇತನದ ಜಿಲ್ಲಾಮಟ್ಟದ ವಿಜ್ಞಾನ ಮೇಳದಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಿಂದ ಒಟ್ಟು 86 ವಿದ್ಯಾರ್ಥಿಗಳು ಭಾಗವಹಿಸಿ ವಿಜ್ಞಾನ, ಗಣಿತ, ಸಮಾಜವಿಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ಕರಕುಶಲವಸ್ತುನಿರ್ಮಾಣ ಸ್ಪರ್ಧೆಗಳಲ್ಲಿ 30 ಪ್ರಥಮ ಬಹುಮಾನಗಳನ್ನೂ, 14 ದ್ವಿತೀಯ ಬಹುಮಾನಗಳನ್ನೂ, 4 ತೃತೀಯ ಬಹುಮಾನಗಳನ್ನೂ ಗಳಿಸಿರುತ್ತಾರೆ. ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯು ಜಿಲ್ಲಾಮಟ್ಟದಲ್ಲಿ ಎರಡನೇ ಸ್ಥಾನವನ್ನು ಗಳಿಸಲು ಕಾರಣರಾದ ಈ ಎಲ್ಲಾ ವಿದ್ಯಾರ್ಥಿಗಳನ್ನೂ ಸಂಸ್ಥೆಯ ಸಂಸ್ಥಾಪಕ ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿಯವರು, ಶಾಲಾ ಆಡಳಿತ ಮಂಡಳಿ ಹಾಗೂ ಕ್ಷೇಮಸಮಿತಿಯ ಸರ್ವಸದಸ್ಯರು ಅಭಿನಂದಿಸಿರುತ್ತಾರೆ.


