ಮಧೂರು: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು 59 ನೇ ಚಾತುರ್ಮಾಸ್ಯ ವ್ರತದ ಮಂಗಲೋತ್ಸವದ ಬಳಿಕ ಪ್ರಥಮವಾಗಿ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿದರು.
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರಿಗೆ ಮಧೂರು ದೇಗುಲದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಮಧೂರು ದೇವಸ್ಥಾನದ ನವೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಪ್ರಸ್ತುತ ಕಾಮಗಾರಿಯ ಬಗ್ಗೆ ಶ್ರೀಗಳು ವೀಕ್ಷಿಸಿದರು.


