ಪೆರ್ಲ: ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಮಂತ್ರಾಲಯ ಇದರ ಸಂಯೋಜಕರಾಗಿ ದಾಸಸಂಕಿರ್ತನಕಾರ ರಾಮಕೃಷ್ಣ ಕಾಟುಕುಕ್ಕೆಯವರನ್ನು ಇತ್ತೀಚೆಗೆ ನೇಮಕಗೊಳಿಸಲಾಗಿದೆ. ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ರಾಮಕೃಷ್ಣ ಕಾಟುಕುಕ್ಕೆಯವರಿಗೆ ಶಾಲು ಹೊದಿಸಿ ,ಪ್ರಮಾಣ ಪತ್ರ, ಸ್ಮರಣಿಕೆ ನೀಡಿದರು.
ಈಗಾಗಲೇ ತಿರುಪತಿ ತಿರುಮಲ ದಾಸ ಸಾಹಿತ್ಯ ಯೋಜನೆಯಡಿಯಲ್ಲಿ ದ.ಕ ಕನ್ನಡ ಜಿಲ್ಲೆ, ಕಾಸರಗೋಡಿನಿಂದ ಪ್ರಪ್ರಥಮವಾಗಿ ತಿರುಪತಿಯ ದಾಸಸಾಹಿತ್ಯ ಯೋಜನೆಯ ಪ್ರಚಾರಕ ಮತ್ತು ಆಹ್ವಾನಿತ ಗಾಯಕರಾಗಿ ನೇಮಕಗೊಂಡ ಏಕೈಕ ಗಾಯಕರೆಂಬ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾಸರಗೋಡಿನ ಅನೇಕ ಭಜನಾರ್ಥಿಗಳಿಗೆ ಭಜನಾ ಕಮ್ಮಟ -ತರಬೇತಿ ನೀಡಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್‍ನ ಮೂಲಕ ಹಲವು ಭಜನ ತಂಡಗಳ ಸೃಷ್ಠಿಗೆ ಇವರು ಕಾರಣರಾಗಿದ್ದಾರೆ. ಇದೀಗ ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್‍ನಡಿಯಲ್ಲಿ ಸುಮಾರು 58 ಭಜನಾ ತಂಡಗಳು ನೋಂದವಣೆಗೊಂಡಿದ್ದು 42 ತಂಡಗಳ ಹೆಸರುಗಳು ಮುಂದಿನ ದಿನಗಳಲ್ಲಿ ನೋಂದಾವಣೆಗೊಳ್ಳಲಿದೆ.


