ಮಂಜೇಶ್ವರ: ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ ಹಾಗು ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿಯ ನೇತೃತ್ವದಲ್ಲಿ ಡಿ.9 ರಂದು ಉಪ್ಪಳದಲ್ಲಿ ನಡೆಯುವ ಮೊಗೇರ ವಧು-ವರರ ಸಮಾವೇಶದ ಪ್ರಾದೇಶಿಕ ಸಮಿತಿ ಸಭೆಯು ಮೀಯಪದವು ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಬಾಬು ಯು.ಪಚ್ಲಂಪಾರೆ ಅಧ್ಯಕ್ಷತೆ ವಹಿಸಿದರು. ಮೀಯಪದವು ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ಸಂಜೀವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಕಾರ್ಯದರ್ಶಿ ಮೋಹನ ಯು.ಮಂಜೇಶ್ವರ, ಮಾಧವ ಮೀಯಪದವು ಮೊದಲಾದವರು ಭಾಗವಹಿಸಿದರು.

