ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಪಯೋಗ ಶೂನ್ಯ ಪೆನ್ನುಗಳನ್ನು ಸಂಗ್ರಹಿಸಿಸುವ ಪೆನ್ ಫ್ರೆಂಡ್ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಬಿ.ಆರ್.ಸಿ. ಸಂಯೋಜಕಿ ಸುಪ್ರಿಯಾ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬಳಸಿ ಉಪಯೋಗ ಶೂನ್ಯವಾದ ಪೆನ್ನುಗಳನ್ನು ಸಂಗ್ರಹಿಸಿ ಮರು ಬಳಕೆ ಮಾಡುವ ಅಥವಾ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಪೆನ್ ಫ್ರೆಂಡ್ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ಪೆನ್ ಫ್ರೆಂಡ್ ಯೋಜನೆಯಂತೆ ಮನೆ, ಶಾಲಾ ಪರಿಸರದಲ್ಲಿ ಎಸೆಯಲಾದ ಪೆನ್ನುಗಳನ್ನು ಸಂಗ್ರಹಿಸಿ ಯೋಜನೆಯನ್ನು ಅನುಸರಿಸುವಂತೆ ವಿನಂತಿಸಿದರು.ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು.


