ಕಾಸರಗೋಡು: ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೊಂಡ ಬಳಿಕ ಆ ಕಾನೂನಿನಂತೆ ಕಾಸರಗೋಡು ಪೆÇಲೀಸ್ ಠಾಣೆಯಲ್ಲಿ ಮೊದಲ ಕೇಸು ದಾಖಲಾಗಿದೆ.
ಶಿರಿಬಾಗಿಲು ಸಮೀಪದ ಪುಳ್ಕೂರಿನ ಮೈಮೂನಾ (29) ಅವರು ನೀಡಿದ ದೂರಿನಂತೆ ಆಕೆಯ ಪತಿ ಕೂಡ್ಲು ಬಳ್ಳೂರು ಹೌಸ್‍ನ ಅಶ್ರಫ್ ವಿರುದ್ಧ ಪೆÇಲೀಸರು ತ್ರಿವಳಿ ತಲಾಖ್ ನಿಷೇಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಮೈಮೂನಾ ಮತ್ತು ಅಶ್ರಫ್ ಅವರ ವಿವಾಹ 2007 ಜುಲೈ 15 ರಂದು ನಡೆದಿತ್ತು. 2019 ಮಾರ್ಚ್ 15 ರಂದು ಆತ ಮೈಮೂನಾ ಅವರ ಸಹೋದರನ ಫೆÇೀನ್‍ಗೆ ವಾಟ್ಸ್‍ಪ್ ಸಂದೇಶ ಮೂಲಕ ತಲಾಖ್ ನೀಡಿದ್ದನೆಂದು ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೆÇಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

