ಮಂಜೇಶ್ವರ: ಮುಡೂರ್ ತೋಕೆಯ ಶ್ರೀಸುಬ್ರಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಲಭಿಸಿದ ಲ್ಯಾಪ್ಟಾಪ್ ಹಾಗೂ ಪ್ರಾಜೆಕ್ಟರ್ ಗಳ ಉದ್ಘಾಟನೆ ಮತ್ತು ಓಣಂ ಹಬ್ಬದ ಆಚರಣೆಯು ಇತ್ತೀಚೆಗೆ ಜರಗಿತು.
ಮಂಜೇಶ್ವರ ಉಪ ಜಿಲ್ಲಾ ಕ್ಷೇತ್ರ ನಿರೂಪಣಾಧಿಕಾರಿ ವಿಜಯಕುಮಾರ್ ಉದ್ಘಾಟಿಸಿದರು. ಲ್ಯಾಪ್ಟಾಪ್ ಪ್ರೊಜೆಕ್ಟ್ರ್ ಗಳ ಉದ್ಘಾಟನೆಯನ್ನು ನಿವೃತ ಮುಖ್ಯೋಪಾಧ್ಯಾಯಿನಿ ಚಂದ್ರವತಿ ನೆರವೇರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಗೂ ಮಾತೃ ಸಂಘದ ಅಧ್ಯಕ್ಷೆ ಮಮತಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಹಾಗೂ ಇತರ ಆಟೋಟ ಸ್ಪರ್ಧೆ ಮಕ್ಕಳಿಗೆ, ಮಕ್ಕಳ ಹೆತ್ತವರಿಗೆ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಶಿಕ್ಷಕ ಶೈಲೇಶ್ ವಂದಿಸಿದರು. ಶಿಕ್ಷಕಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.


