ಉಪ್ಪಳ: ರಾಜ್ಯ ಲೈಬ್ರರಿ ಕೌನ್ಸಿಲ್ ನೇತೃತ್ವದಲ್ಲಿ ಬಾಲೋತ್ಸವಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳ ಸೃಜನಶೀಲ ಬೆಳವಣಿಗೆಗಳಿಗೆ ಸ್ಥಳೀಯ ಮಟ್ಟದ ಪ್ರೋತ್ಸಾಹ ನೀಡಿ ಪ್ರತಿಭಾ ಅನಾವರಣಕ್ಕೆ ಪೂರಕವಾಗಿದೆ ಎಂದು ಕೇರಳ ತುಳು ಅಕಾಡೆಮಿ ಸದಸ್ಯೆ ಗೀತಾ ಸಾಮಾನಿ ಅವರು ತಿಳಿಸಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ತನ್ನ ಗ್ರಂಥಾಲಯಗಳ ಬಾಲವೇದಿಕೆಯ ಸದಸ್ಯರಿಗಾಗಿ ಸಂಘಟಿಸುವ ಬಾಲೋತ್ಸವದ ಭಾಗವಾಗಿ ಪೈವಳಿಕೆ ನಗರ ಸರ್ಕಾರಿ ಹೈಸ್ಕೂಲಿನಲಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಸುಹರಾ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ರಾಘವ ಬಲ್ಲಾಳ್, ಗ್ರಾ.ಪಂ.ಸದಸ್ಯರಾದ ಸುಜಾತಾ ಬಿ.ರೈ., ಗೋಪಾಲಕೃಷ್ಣ ಪಜ್ವ, ಭಾರತಿ ಸುಳ್ಯಮೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಜಯನ್ ಕೆ.ಟಿ., ಉದಯ ಸಾರಂಗ್, ಜಯಂತ ಮಾಸ್ತರ್ ಶುಭಾಶಂಸನೆಗೈದರು. ಅಹಮ್ಮದ್ ಹುಸೈನ್ ಪಿ.ಕೆ.ಸ್ವಾಗತಿಸಿ, ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು.
ಸಮಾರೋಪಮ ಸಮಾರಂಭದಲ್ಲಿ ಶ್ರೀಕುಮಾರಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಶಾಮ ಭಟ್ ಯು.ಉದ್ಘಾಟಿಸಿದರು. ಉಮೇಶ್ ಅಟ್ಟೆಗೋಳಿ, ಆಶಾ ದಿಲೀಪ್ ಸುಳ್ಯಮೆ, ರವೀಂದ್ರ ಶೆಟ್ಟಿ ಬೊಳ್ಳಾರು, ಸುರೇಶ ಬಂಗೇರ, ರವೀಂದ್ರ ಸುಳ್ಯಮೆ ಶುಭಹಾರೈಸಿದರು. ಕಮಲಾಕ್ಷ ದೇರಂಬಳ ಸ್ವಾಗತಿಸಿ, ದಾಸಪ್ಪನ ಶೆಟ್ಟಿ ಕರುಪೋಳು ವಂದಿಸಿದರು.


