HEALTH TIPS

ಕುಲಾಲ ಸಂಘದಿಂದ ಸೋಣದ ಸುಗಿಪು-ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

         ಕುಂಬಳೆ: ಜಿಲ್ಲಾ ಕುಲಾಲ ಸಂಘ ಕುಂಬಳೆ ಪಂಚಾಯತಿ ಶಾಖೆಯ ನೇತೃತ್ವದಲ್ಲಿ ಸೋಣದ ಸುಗಿಪು ಕಾರ್ಯಕ್ರಮ ಇತ್ತೀಚೆಗೆ ಕುಂಬಳೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.
   ಕಾರ್ಯಕ್ರಮವನ್ನು ಮುಳಿಯದ ಶ್ರೀವೈಷ್ಣವಿ ಆದಿಶಕ್ತಿ ಸೇವಾ ಸನ್ನಿಧಿಯ ಶಿವಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸ್ವಾಮೀಜಿ ಅವರು, ಮನುಷ್ಯನ ಆಹಾರ ಸೇವನೆ ನೈಸರ್ಗಿಕವಾಗಿರಬೇಕು. ಕಾಲಮಾನಕ್ಕನುಸರಿಸಿ ಔಷಧೀಯ ಗುಣಗಳಿರುವ ಆಹಾರ ವಸ್ತುಗಳ ಸೇವನೆ ಮಾಡಬೇಕು. ದುಷ್ಟ ವ್ಯಸನಗಳಿಂದ ದೂರವಿದ್ದರೆ ಮಾತ್ರ ಆರೋಗ್ಯವಂತ ಸುದೃಢ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರು ಸೋಣದ ಸುಗುಪು ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ, ಶ್ರಾಮಣ ಮಾಸದ ಪುಣ್ಯ ಮಾಸದಲ್ಲಿ ಮನೆಯ ಹೊಸ್ತಿಲಿಗೆ ಹೂಗಳ ರಂಗೋಲಿ ಬಿಡಿಸಿ ದೈವ ದೇವರುಗಳನ್ನು ಪ್ರಾರ್ಥಿಸುವ ವಿಶೇಷ ತಿಂಗಳಾಗಿ ಗುರುತಿಸಲ್ಪಟ್ಟಿದೆ. ಜೊತೆಗೆ ಆಟಿ ತಿಂಗಳ ಕಷ್ಟ ಕಾರ್ಪಣ್ಯಗಳೆಲ್ಲ ಮಾಸಿ ಸುಖ ಸಂತಸಗಳನ್ನು ಬರಮಾಡಿಕೊಳ್ಳುವ ತಿಂಗಳು ಇದಾಗಿದೆ. ತುಳುನಾಡಿನಲ್ಲಿ ಪ್ರತಿಯೊಂದು ತಿಂಗಳುಗಳ ಆಚರಣೆಗಳಿಗೂ ಪ್ರತ್ಯೇಕ ಮಹತ್ವಗಳಿವೆ ಎಂದು ತಿಳಿಸಿದರು. ಪ್ರಾಚೀನ ತುಳುನಾಡಿನ ಕುಂಬಾರ ಜನಾಂಗ ತನ್ನ ವಿಶಿಷ್ಟ ಆಚರಣೆಗಳಿಂದ ಗುರುತಿಸಿಕೊಂಡಿದೆ. ಉತ್ತರ ಭಾರತದಲ್ಲಿ ವ್ಯಾಪಕವಾಗಿ ಆಚರಿಸಲ್ಪಡುತ್ತಿದ್ದ ವರಮಹಾಲಕ್ಷ್ಮೀ ವ್ರತಾಚರಣೆಯಷ್ಟೇ ಮಹತ್ ತುಳುನಾಡಿನ ಕೆಡ್ಡಸ ಆಚರಣೆಗೆ ಇದೆ ಎಂದು ಅವರು ತಿಳಿಸಿದರು.
     ಕುಂಬಳೆ ಶಾಖಾ ಅಧ್ಯಕ್ಷ ಶ್ರೀನಿವಾಸ ಮಾಸ್ತರ್ ಕಮಾರ್ತೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ನಾರಾಯಣ ಮಾಸ್ತರ್ ಕಮಾರ್ತೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕುಲ ಕಸುಬುಗಾರ ಕೃಷ್ಣ ಮೂಲ್ಯ ಮಳಿ, ಪಾಕಶಾಸ್ತ್ರಜ್ಞ ಬಾಬು ಮೂಲ್ಯ ಬಡಗುರಿ, ಹಿರಿಯ ಜಾನಪದ ಕಲಾವಿದ ಬಟ್ಟು ಮೂಲ್ಯ ಪುಣಿಯೂರು ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನ ಹತ್ತನೇ ತರಗತಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈದು ಉತ್ತೀರ್ಣರಾದ ವರ್ಷಾ ಆರ್.ಕಿದೂರು, ಪೂಜ್ಯಶ್ರೀ ನಾರಾಯಣಮಂಗಲ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಳಿಕ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಕಲಿಕೋಪಕರಣ ವಿತರಣೆ ನಡೆಯಿತು. ಸಂಘದ ಕಾರ್ಯದರ್ಶಿ ಶ್ರೀಧರ ಪುಣಿಯೂರು ಸ್ವಾಗತಿಸಿ, ಅಶೋಕ ಪುಣಿಯೂರು ವಂದಿಸಿದರು. ಕೃಷ್ಣ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಭೋಜನದ ಬಳಿಕ ವಿವಿಧ ಸಾಂಸ್ಕøತಿಕ ವೈವಿಧ್ಯಗಳ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries