ಮಂಜೇಶ್ವರ: ಮಂಗಳಮುಖಿಯರು ಕೂಡಾ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರಲ್ಲಿಯೂ ಒಳ್ಳೆಯ ಗುಣಗಳಿವೆ. ಅದಕ್ಕಾಗಿ ಎಲ್ಲಾ ವಿದ್ಯಾವಂತ ಸಮೂಹ ಅವರನ್ನು ಮಾನವೀಯತೆಯಿಂದ ಕಾಣಬೇಕಾಗಿದೆ ಎಂದು ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಹೇಳಿದರು.
ಅವರು ಬಂಗ್ರಮಂಜೇಶ್ವರ ಸರ್ಕಾರಿ ಪ್ರೌಢ ಶಾಲೆಯ ಸಾಮಾಜಿಕ ನ್ಯಾಯ ಇಲಾಖೆ ಕೌನ್ಸಿಲಿಂಗ್ ಸೆಲ್‍ನ ವತಿಯಿಂದ ಶನಿವಾರ ನಡೆದ `ಟ್ನಾನ್ಸ್‍ಜೆಂಡರ್ ಸಂವೇದನೆ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಮಂಗಳಮುಖಿಯರನ್ನು ಶೋಷಣೆ ಮಾಡುವುದರಿಂದಲೇ ಅವರು ಭಿಕ್ಷೆ ಬೇಡಬೇಕಾದ ಸ್ಥಿತಿ ಬಂದೊದಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸ ಹಾಗು ಕೆಲವು ಕ್ಷೇತ್ರಗಳಲ್ಲಿ ಅವರು ಮುಂದೆ ಬರುತ್ತಿರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಬಿ.ಭಾಸ್ಕರನ್ ವಹಿಸಿದ್ದರು. ಕಾಸರಗೋಡು ಡಿ.ಎಸ್.ಜೆ.ಒ. ಇಲಾಖೆಯ ಹಿರಿಯ ಅಧಿಕಾರಿ ಅರುಣ್, ಕಿರಿಯ ಮೇಲ್ವಿಚಾರಕ ಅಬ್ದುಲ್ಲ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್, ಮಂಜೇಶ್ವರ ಐಸಿಡಿಸಿಯ ಸಿಡಿಪಿಒ ಸುಧಾಮಣಿ, ಶಾಲಾ ಪ್ರಾಂಶುಪಾಲ ಸುರೇಶ್ ಕುಮಾರ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಶಾಲಿನಿ ಟೀಚರ್ ಉಪಸ್ಥಿತರಿದ್ದರು. ಸಭೆಯಲ್ಲಿ ಮಂಗಳಮುಖಿ ಇಶಾ ಕಿಶೋರ್ ಅವರು ಸಂವಾದ ಕಾರ್ಯಕ್ರಮದಲ್ಲಿ ಮಂಗಳಮುಖಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗಾಯತ್ರಿ ಸ್ವಾಗತಿಸಿ,ಶಾಲಾ ಕೌನ್ಸೆಲರ್ ಟಾಲ್ಸಿ ಟಾಮ್ ವಂದಿಸಿದರು. ಸಿಲ್ವಿಯಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.