ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ `ರಾಜಸೂಯಾಧ್ವರ' ಯಕ್ಷಗಾನ ತಾಳಮದ್ದಳೆ ಜರಗಿತು.
ಭಾಗವತ ಮೋಹನ ಮೆಣಸಿನಕಾನ ಮತ್ತು ಮನೆಯವರಿಂದ ಸೇವಾರೂಪವಾಗಿ ಅಳವಡಿಸಲ್ಪಟ್ಟ ಈ ಕಲಾ ಕಾರ್ಯಕ್ರಮದ ಮೊದಲಿಗೆ ಕ್ಷೇತ್ರ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ನಡೆಸಲ್ಪಟ್ಟಿತು. ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ ಅವರ ಹಿರಿತನದಲ್ಲಿ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಮುನ್ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಶಶಾಂಕ ಎಲಿಮಲೆ, ದಯಾನಂದ ಬಂದ್ಯಡ್ಕ, ಮೋಹನ ಮೆಣಸಿನಕಾನ ಕಾಣಿಸಿಕೊಂಡರು. ಚೆಂಡೆಮದ್ದಳೆ ವಾದನದಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಅವರು ಸಹಕರಿಸಿದರು. ಪಾತ್ರವರ್ಗದಲ್ಲಿ ಕೀರಿಕ್ಕಾಡು ಗಣೇಶ ಶರ್ಮ ಸಿದ್ಧಕಟ್ಟೆ (ಶ್ರೀಕೃಷ್ಣ 1ನೇಭಾಗ), ನಾರಾಯಣ ಪಾಟಾಳಿ ಮಯ್ಯಾಳ (ಇಂದ್ರಸೇನ), ಕಲ್ಲಡ್ಕ ಗುತ್ತು ರಾಮಯ್ಯ ರೈ (ಧರ್ಮರಾಯ), ಎ.ಜಿ. ಮುದಿಯಾರು (ಅರ್ಜುನ), ವೀರಪ್ಪ ಸುವರ್ಣ ನಡುಬೈಲು (ಭೀಮಸೇನ 1ನೇ ಭಾಗ) ಮೋಹನ ಸುವರ್ಣ ಬೆಳ್ಳಿಪಾಡಿ (ಭೀಷ್ಮ), ಬೆಳ್ಳಿಪ್ಪಾಡಿ ಸದಾಶಿವ ರೈ (ಶಿಶುಪಾಲ), ಎಂ.ರಮಾನಂದ ರೈ ದೇಲಂಪಾಡಿ (ದಂತವಕ್ತ್ರ), ರಾಮನಾಯ್ಕ ದೇಲಂಪಾಡಿ(ಭಗದತ್ತ), ಬಿ.ಹೆಚ್.ವೆಂಕಪ್ಪ ಗೌಡ(ಭೀಮಸೇನ 2ನೇ ಭಾಗ), ಕೃಷ್ಣಪ್ಪ ಗೌಡ ಕುತ್ತಿಮುಂಡ (ಶ್ರೀಕೃಷ್ಣ 2ನೇ ಭಾಗ) ಅವರು ಅರ್ಥಧಾರಿಗಳಾಗಿ ಸಮರ್ಥವಾದ ಪಾತ್ರಚಿತ್ರಣವನ್ನು ತೋರಿಸಿಕೊಟ್ಟರು. ನಂದಕಿಶೋರ ಬನಾರಿ ಅವರು ಸ್ವಾಗತಿಸಿ, ರಾಮಯ್ಯ ರೈ ವಂದಿಸಿದರು.