HEALTH TIPS

ಮಳೆ ನಿಂತು ಹೋದ ಮೇಲೆ........ಬಿಸಿಲ ತಾಪ ಏರಿದೆ-ರಾಜ್ಯಾದ್ಯಂತ ಹೆಚ್ಚಿದ ತಾಪಮಾನ

      ತಿರುವನಂತಪುರ: ವಾರ್ಷಿಕವಾಗಿ ಆರಂಭಗೊಳ್ಳಬೇಕಿದ್ದ ಋತುವಿಗಿಂತ ಒಂದು ತಿಂಗಳು ತಡವಾಗಿ ಆರಂಭಗೊಂಡ ಮಳೆ ವಿಪರೀತ ಪ್ರಮಾಣದಲ್ಲಿ ಸುರಿದರೂ ಇದೀಗ ಮಳೆ ನಿಂತಾಗ ಕಠಿಣ ಬಿಸಿಲು ಅನುಭವಕ್ಕೆ ಬರುತ್ತಿದೆ. ಮಳೆ ನಿಂತ ಬಳಿಕ ಕೇರಳದ ಎಲ್ಲ ಸ್ಥಳಗಳಲ್ಲಿ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ಅನುಭವಕ್ಕೆ ಬಂದಿದೆ. ವಿವಿಧ ಜಿಲ್ಲೆಗಳಲ್ಲಿ30 ಡಿಗ್ರಿ ಸೆಲ್ಶಿಯಸ್ ಹಾಗೂ ಅದಕ್ಕಿಂತ ಹೆಚ್ಚು ಉಷ್ಣಾಂಶ ಅನುಭವಕ್ಕೆ ಬಂದಿದೆ. ಕೋಝಿಕ್ಕೋಡು, ತಿರುವನಂತಪುರ, ಕಣ್ಣೂರು, ಪಾಲಕ್ಕಾಡು ಜಿಲ್ಲೆಗಳಲ್ಲಿ30 ಡಿಗ್ರಿ ಸೆಲ್ಶಿಯಸ್ ಹಾಗೂ ಅದಕ್ಕಿಂತ ಹೆಚ್ಚು ಉಷ್ಣಾಂಶ ಲಭಿಸಿದೆ. ವಯನಾಡಿನ ಕಲ್ಪಟ್ಟದಲ್ಲಿ26 ಡಿಗ್ರಿ ಸೆಲ್ಶಿಯಸ್, ಇಡುಕ್ಕಿಯಲ್ಲಿ24 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಭಾನುವಾರ ಅನುಭವಕ್ಕೆ ಬಂದಿದೆ.
     ಮುಂದಿನ 10 ದಿನ ಕೇರಳದಲ್ಲಿಸಾಧಾರಣ ಮಳೆಗೆ ಮಾತ್ರವೇ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಸೂಚಿಸಿದೆ. ಸೆ.20ರ ವರೆಗೆ ಮಿಕ್ಕ ಜಿಲ್ಲೆಗಳಲ್ಲಿಬಿಸಿಲು ಹೆಚ್ಚು ಹಾಗೂ ಮಳೆ ಕಡಿಮೆ ಆಗಲಿದೆ. ತೀವ್ರತೆ ಹೆಚ್ಚಿರುವ ಬಿಸಿಲಿನ ಸಾಧ್ಯತೆ ಇರುವುದಾಗಿ ಹವಾಮಾನ ತ ಜ್ಞ ರು ಹೇಳಿದ್ದಾರೆ.
     ಮುಂದಿನ 14 ತಿಂಗಳಲ್ಲಿಅತ್ಯಧಿಕ ಉಷ್ಣಾಂಶ ಸೆ.24ರಂದು ಆಗಿರಲಿದೆ ಎಂದು ಸೂಚಿಸಲಾಗಿದೆ. ಅಂದು ಹಗಲು 31ಡಿಗ್ರಿ ಸೆಲ್ಶಿಯಸ್‍ವರೆಗೆ ಉಷ್ಣಾಂಶ ಇರಲಿದೆ ಎಂದು ಹೇಳಲಾಗಿದೆ. ದಕ್ಷಿಣ ಜಿಲ್ಲೆಗಳಲ್ಲಿತಿರುವನಂತಪುರದಿಂದ ಕೊಚ್ಚಿವರೆಗೆ ಅತ್ಯಧಿಕ ಉಷ್ಣಾಂಶ ಅನುಭವಕ್ಕೆ ಬರುವಾಗ ಉತ್ತರ ಕೇರಳದಲ್ಲಿಕೋಝಿಕ್ಕೋಡು, ವಯನಾಡು, ಮೈಸೂರು ಭಾಗಗಳಲ್ಲಿಹಗಲು ಕಡಿಮೆ ಉಷ್ಣಾಂಶ ಸಾಧ್ಯತೆ ಇರುವುದಾಗಿ ಸೂಚಿಸಲಾಗಿದೆ.
      ಮಲಪ್ಪುರ, ಕೋಝಿಕ್ಕೋಡು, ಪಾಲಕ್ಕಾಡು ಸಹಿತ ಇದುವರೆಗೆ ಉತ್ತಮ ಮಳೆ ಲಭಿಸಿದ್ದ ಜಿಲ್ಲೆಗಳಲ್ಲಿಮಳೆ ಕುಸಿಯುವ ಸಾಧ್ಯತೆ ಇದೆ. ಆದರೆ ಮಳೆಗಾಲದಲ್ಲಿಅತ್ಯಧಿಕ ಮಳೆ ಲಭಿಸಿದ್ದ ಮಲೆನಾಡು ವಲಯಗಳಲ್ಲಿಅನಿರೀಕ್ಷಿತ ಮಳೆ ಲಭಿಸುವ ಸಾಧ್ಯತೆ ಇದೆ. ಗಾಳಿಯ ದಿಕ್ಕು ಹಾಗೂ ಶಕ್ತಿ ಅನುಕೂಲವಾಗಿರುವುದರಿಂದ ಕೆಲವೆಡೆ ಶಕ್ತಿಯುತವಾದ ಆದರೆ ನಿರಂತರವಾದ ಮಳೆ ಲಭಿಸಲಿದೆ. ಮಲೆನಾಡಿಗೆ ಇದಕ್ಕೆ ಸಾಧ್ಯತೆ ಹೆಚ್ಚಿರುವುದರಿಂದ ಹೊಳೆಗಳಲ್ಲಿಸ್ನಾನಕ್ಕಿಳಿಯುವುದು, ಈಜು ಇತ್ಯಾದಿ ಸುರಕ್ಷಿತವಲ್ಲ. ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಸಿಡಿಲನ್ನೊಳಗೊಂಡ ಬಿರುಸಿನ ಮಳೆಗೆ ಸಾಧ್ಯತೆ ಹೆಚ್ಚಿದೆ.
      ಮುಂಗಾರು ಬಳಿಕ ಮಳೆ ಇಳಿಕೆ: ಈ ಬಾರಿ ಮುಂಗಾರು ಬಳಿಕ ಮಳೆ ಕುಸಿಯಲಿದೆ ಎಂದು ಹವಾಮಾನ ನಿರೀಕ್ಷಣಾ ಕೇಂದ್ರ ಹೇಳಿದೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆ ರಾಜ್ಯದಲ್ಲಿಲಭಿಸಿದೆ.
     ಮುಂಗಾರಿನ ಅಂತಿಮ ಹಂತದಲ್ಲಿಮಳೆ ಕುಸಿಯಲಿದೆ ಎಂಬುದು ಹವಾಮಾನ ನಿರೀಕ್ಷಣಾ ಕೇಂದ್ರದ ಲೆಕ್ಕಾಚಾರವಾಗಿದೆ. ಮಳೆಗಾಲದಲ್ಲಿ ಇದುವರೆಗೆ ಶೇ.14ಕ್ಕಿಂತ ಹೆಚ್ಚು ಮಳೆ ಲಭಿಸಿದೆ. 189 ಸೆಂಟಿ ಮೀಟರ್ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಜೂ.1ರಿಂದ ಸೆ.12ರ ವರೆಗೆ ರಾಜ್ಯದಲ್ಲಿ215 ಸೆಂಟಿ ಮೀಟರ್ ಮಳೆ ಲಭಿಸಿದೆ. ನಾಲ್ಕು ಜಿಲ್ಲೆಗಳಲ್ಲಿನಿರೀಕ್ಷೆಗಿಂತ ಹೆಚ್ಚು ಮಳೆ ಲಭಿಸಿದೆ. ಪಾಲಕ್ಕಾಡು ಜಿಲ್ಲೆಯಲ್ಲಿಶೇ.42 ಅಧಿದಷ್ಟು ಅಧಿಕ ಮಳೆ ಲಭಿಸಿದೆ.
      ಅತ್ಯಧಿಕ ಮಳೆ ಲಭಿಸಿದ್ದು ಕೋಝಿಕ್ಕೋಡು ಜಿಲ್ಲೆಯಲ್ಲಾಗಿದೆ. ಕೋಝಿಕ್ಕೋಡು ಜಿಲ್ಲೆಯಲ್ಲಿ334 ಸೆಂಟಿ ಮೀಟರ್ ಮಳೆ ಲಭಿಸಿದೆ. ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲೂ 300 ಸೆಂಟಿಮೀಟರ್‍ಗಿಂತ ಹೆಚ್ಚು ಮಳೆ ಲಭಿಸಿದೆ. ಇಡುಕ್ಕಿ, ವಯನಾಡು ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಲಭಿಸಿದೆ. ಸೆ.30ರ ವರೆಗೆ ಮುಂಗಾರು ಕಾಲಾವಧಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries