ಕಾಸರಗೋಡು: ಓಣಂ ಹಬ್ಬದ ದಿನಗಳಲ್ಲಿ ಹಾಲು ಮಾರಾಟದಲ್ಲಿ ಮಿಲ್ಮಾ ಹೊಸ ದಾಖಲೆ ನಿರ್ಮಿಸಿದೆ.
ಪೂರಾಡಂ ಮತ್ತು ಉತ್ತರಾಡಂ ದಿನಗಳಲ್ಲಾಗಿ ಕೇರಳದಾದ್ಯಂತ ಮಿಲ್ಮಾ 46.60 ಲೀಟರ್ ಹಾಲು ಮತ್ತು 5.90 ಲಕ್ಷ ಲೀಟರ್ ಮೊಸರು ಮಾರಾಟ ಮಾಡಿದೆ. ಓಣಂ ಅವಧಿಯಲ್ಲಿ ಎರಡು ದಿನಗಳಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಾಲು ಮತ್ತು ಮೊಸರು ಮಾರಾಟವಾಗಿರುವುದು ಮಿಲ್ಮಾದ ಚರಿತ್ರೆಯಲ್ಲೇ ಪ್ರಥಮವಾಗಿದೆ ಎಂದು ಮಿಲ್ಮಾ ಅಧ್ಯಕ್ಷ ಪಿ.ಎ.ಬಾಲನ್ ತಿಳಿಸಿದ್ದಾರೆ.


