ಕಾಸರಗೋಡು: ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳು, ವಿದ್ಯುತ್ ಕಚೇರಿಗಳು ಮತ್ತು 20 ಲಕ್ಷ ಮನೆಗಳಿಗೆ ಉಚಿತವಾಗಿ ಇಂಟರ್‍ನೆಟ್ ಸೌಕರ್ಯ ಒದಗಿಸಲು ಕೆ-ಫೆÇೀನ್ ಎಂಬ ಹೊಸ ಯೋಜನೆ ಜಾರಿಗೊಳಿಸಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ. ಇದಕ್ಕೆ 1028 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಇದರಂತೆ ವಿದ್ಯುತ್ ಪೂರೈಕೆ ಮತ್ತು ವಿತರಿಸುವ ಲೈನುಗಳ ಮೂಲಕ ಫೈಬರ್ ಓಪ್ಟಿಕಲ್ ಕೇಬಲ್‍ಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಬೆಲ್ ಮತ್ತು ರೆಯಿಲ್‍ಟೆಲ್ ಎಂಬೀ ಸಂಸ್ಥೆಗಳಿಗೆ ವಿದ್ಯುನ್ಮಂಡಳಿ ಈಗಾಗಲೇ ಟೆಂಡರ್‍ಗಳನ್ನು ನೀಡಿದೆ.


