ಮಂಜೇಶ್ವರ: ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳದ ಪ್ರಧಾನ ಹಬ್ಬವಾದ ಓಣಂ ಆಚರಣೆಯನ್ನು ಆಚರಿಸಲಾಯಿತು.
ಆ ಪ್ರಯುಕ್ತ ಹೂವಿನ ರಂಗೋಲಿಯನ್ನು ಬಿಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ರವರು ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆಯನ್ನು ತಿಳಿಸಿದರು. ಮಧ್ಯಾಹ್ನ ವಿಶೇಷ ಓಣಂ ಔತಣವನ್ನು ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕರಾದ ಜಯಪ್ರಶಾಂತ್ ಪಾಲೆಂಗ್ರಿ, ಸೌಮ್ಯ ಪಿ, ನಯನ ಎಂ, ಅಶ್ವಿನಿ ಎಲಿಯಾಣ, ಪ್ರಿಯಾಂಕ ಕೇಮಜಾಲ್, ಜಲಜ ಪೊಯ್ಯೆಲ್ ಉಪಸ್ಥಿತರಿದ್ದು ಸಹಕರಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಜಲ ಪ್ರಳಯಕ್ಕೆ ತತ್ತರಿಸಿದ ಜನತೆಗೆ ಸಹಾಯಾರ್ಥವಾಗಿ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ಧನ ಸಂಗ್ರಹ ಮಾಡಲಾಯಿತು.


