ಕಾಸರಗೋಡು: ಸೆ.29 ರಂದು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ಚುಟುಕು ವಾಚನಗೋಷ್ಠಿಯ ಅಧ್ಯಕ್ಷೆಯಾಗಿ ಪೆರ್ಲ ಕಾಟುಕುಕ್ಕೆಯ ಬಹುಮುಖ ಪ್ರತಿಭೆ ಸೃಷ್ಟಿ ಕೆ.ಶೆಟ್ಟಿ ಆಯ್ಕೆಯಾಗಿದ್ದಾಳೆ. ಕಾಸರಗೋಡು ಜಿಲ್ಲಾ ಐದನೇ ಚುಟುಕು ಸಾಹಿತ್ಯ ಸಮ್ಮೇಳನದಂಗವಾಗಿ ರಾಜ್ಯ ಮಟ್ಟದ ಮಕ್ಕಳ ಚುಟುಕು ವಾಚನಗೋಷ್ಠಿಯನ್ನು ಆಯೋಜಿಸಲಾಗಿದೆ.
ಕಾಟುಕುಕ್ಕೆ ಪಟ್ಲದ ರಾಜಾರಾಮ ಶೆಟ್ಟಿ ಕೆ.- ಸವಿತ ಆರ್.ಶೆಟ್ಟಿ ದಂಪತಿ ಪುತ್ರಿ ಸೃಷ್ಟಿ ಕೆ.ಶೆಟ್ಟಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ. ಬಾಲ್ಯದಲ್ಲಿಯೇ ಸಾಹಿತ್ಯ - ಕಲೆಗಳಲ್ಲಿ ಆಸಕ್ತಿ ತಾಳಿದ್ದ ಈಕೆ ಗಾಯನ, ನೃತ್ಯದಲ್ಲೂ ಸೈ ಎನಿಸಿದ್ದಾಳೆ. ತಾಲೂಕು, ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾಳೆ. ಝೀ ಟೀವಿಯ ಡ್ರಾಮಾ ಜ್ಯೂನಿಯರ್ ಸೀಸನ್ -3 ಯ ಮೆಗಾ ಅಡಿಶನ್‍ಗೆ ಆಯ್ಕೆಯಾಗಿ ಪ್ರತಿಭೆಯನ್ನು ಪ್ರದರ್ಶಿಸಿದ್ದಳು. ಗೈಡ್ ರಾಜ್ಯ ಮಟ್ಟದ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸೃಷ್ಟಿ ಕೆ.ಶೆಟ್ಟಿ ಕರಾಟೆಯನ್ನೂ ಕಲಿಯುತ್ತಿದ್ದಾಳೆ.
ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ ಸರ್ವಾಧ್ಯಕ್ಷತೆಯಲ್ಲಿ ಸಂಘಟಕ ಶಿವರಾಮ ಕಾಸರಗೋಡು ಅವರ ಸಾರಥ್ಯದಲ್ಲಿ ಸೆ.29 ರಂದು ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನ ಸಾರ್ಥಕವಾಗಲಿದೆ.


