ಮುಳ್ಳೇರಿಯ: ಗ್ರೀನ್ ವುಡ್ ಪಬ್ಲಿಕ್ ಸ್ಕೂಲ್ ಪಾಲಕುನ್ನುನಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಯೋಗ ಅಸೋಸಿಯೇಶನ್ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರವು ಉತ್ತಮ ಸಾಧನೆ ಮಾಡಿದೆ.
ಸ್ಪಧೆ9ಯಲ್ಲಿ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯದಿಂದ ಇಪ್ಪತ್ತೆಂಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಮೈಂದಪಾರ ದಿನೇಶ್ ಕುಮಾರ್‍ರವರ ಪುತ್ರಿ ದೀಪ್ತಿ ಡಿ(ಪ್ರಥಮ),ಅಡೂರು ಸತ್ಯನಾರಾಯಣ ಪಿ ರವರ ಪುತ್ರಿ ಅಸೀಮಾ ಅಗ್ನಿಹೋತ್ರಿ(ಪ್ರಥಮ),ಮೈತ್ರಿನಗರ ಪಂಚಮಿ ನಿಲಯ ಲಕ್ಷ್ಮೀ ನಾರಾಯಣ ಬಲ್ಲಾಳ್‍ರವರ ಪುತ್ರ ರವಿತೇಜ ಕೆ.ಎಲ್(ದ್ವಿತೀಯ),ಕೋಳಿಕ್ಕಜೆ ಸುಮಾ ಅವರ ಪುತ್ರಿ ಮಾನಸ ಕೆ(ಪ್ರಥಮ),ಆದೂರು ರಾಧಾಕೃಷ್ಣರವರ ಪುತ್ರ ಅಭಿಷೇಕ್(ಪ್ರಥಮ), ವಿದ್ಯಾಶ್ರೀಯ ಯೋಗ ಶಿಕ್ಷಕಿ, ಜೋಡುಕಲ್ಲು ಬಟ್ಯಪೂಜಾರಿರವರ ಪುತ್ರಿ ಕಾವ್ಯಶ್ರೀ(ಪ್ರಥಮ)ಬಹುಮಾನಗಳನ್ನು ಗಳಿಸಿ ಪತ್ತನಂತ್ತಿಟ್ಟದಲ್ಲಿ ಸೆ. 27ರಿಂದ 29ರವರಗೆ ನಡೆಯಲಿರುವ ರಾಜ್ಯ ಮಟ್ಟದ ಯೋಗ ಸ್ಪಧೆ9ಯಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಮಟ್ಟದ ಯೋಗ ಸ್ಪಧೆ9ಯಲ್ಲಿ ಸ್ನೇಹ(ತೃತೀಯ),ಜಯಕೃಷ್ಣ(ತೃತೀಯ),ಪ್ರಜಿತ್ ಕುಮಾರ್ (ನಾಲ್ಕನೇ ಸ್ಥಾನ),ಆದಿತ್ಯನ್ ಕೆ(ಐದನೇ ಸ್ಥಾನ)ಪಡೆದು ಜಿಲ್ಲಾ ಮಟ್ಟದ ಯೋಗ ಸ್ಪಧೆ9ಯಲ್ಲಿ ವಿದ್ಯಾಶ್ರೀ ಶಿಕ್ಷಣ ಕೇಂದ್ರಕ್ಕೆ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನವನ್ನು ತಂದುಕೊಟ್ಟಿದ್ದಾರೆ.


