ಕಾಸರಗೋಡು: ಪ್ರಕೃತಿ ಸ್ನೇಹಿಯಾಗಿರುವ ಒಂದು ಸಾವಿರ ಕಾಗದದ ಪೆನ್‍ಗಳನ್ನು ಜಿಲ್ಲಾಡಳಿತೆಗೆ ಹಸ್ತಾಂತರಿಸಲಾಯಿತು. ವಯನಾಡ್ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಅಪಾರ ನಷ್ಟ ಅನುಭವಿಸಿದ ಶಿಕ್ಷಣಾಲಯಗಳ ಮಕ್ಕಳಿಗೆ ವಿತರಣೆ ನೀಡುವ ನಿಟ್ಟಿನಲ್ಲಿ ಈ ಪೆನ್‍ಗಳನ್ನು ಹಸ್ತಾಂತರಿಸಲಾಗಿದೆ.
ಹರಿತ ಕೇರಳಂ ಮಿಷನ್ ಮತ್ತು ಹೊಸದುರ್ಗ ಜಿಲ್ಲಾ ಜೈಲ್ ಜಂಟಿ ವತಿಯಿಂದ ಜಾರಿಗೊಳಿಸುತ್ತಿರುವ `ಸ್ನೇಹತ್ತೂಲಿಕ ಹರಿತಾಕ್ಷರಂ(ಪ್ರೀತಿಯ ಲೇಖನಿಯಿಂದ ಹಸುರು ಅಕ್ಷರ)' ಯೋಜನೆಯ ಅಂಗವಾಗಿ ಇವುಗಳನ್ನು ಸಿದ್ಧಪಡಿಸಲಾಗಿದೆ.
ಸೆರೆಮನೆಯಲ್ಲಿರುವ ಕೈದಿಗಳ ಮಾನಸಿಕ ಸಂಘರ್ಷ ಕಡಿಮೆಗೊಳಿಸುವ, ತ್ಯಾಜ್ಯ ನಿವಾರಣೆ ಸಂದೇಶವನ್ನು ವಿದ್ಯಾರ್ಥಿಗಳಿಗೆ ಹರಡುವ, ಸಂಕಷ್ಟ ಅನುಭವಿಸುತ್ತಿರುವ ಮಕ್ಕಳಿಗೆ ಪುಟ್ಟ ಪ್ರಮಾಣದಲ್ಲಿ ಸಹಾಯ ಒದಗಿಸುವ ಇತ್ಯಾದಿ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ.
ಹೊಸದುರ್ಗದಲ್ಲಿ ನಡೆದ ಸಮಾರಂಭದಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಪೆನ್‍ಗಳನ್ನು ಪಡೆದುಕೊಂಡರು. ಜೈಲ್ ವರಿಷ್ಠಾಕಾರಿ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜೈಲ್ ಅಧಿಕಾರಿ ಷಬಿನ್ ಎಂ., ಹರಿತ ಕೇರಳಂ ಮಿಷನ್ ಸಂಪನ್ಮೂಲ ವ್ಯಕ್ತಿ ಅಭಿರಾಜ್ ಎ.ಪಿ., ವೈ.ಪಿ.ಅಶ್ವಿನಿ ಉಪಸ್ಥಿತರಿದ್ದರು. ಜೈಲ್ ಸಹಾಯಕ ವರಿಷ್ಠಾ„ಕಾರಿ ಎಂ.ಶ್ರೀನಿವಾಸನ್ ಸ್ವಾಗತಿಸಿದರು. ಸಹಾಯಕ ಐಲ್ ಅಧಿಕಾರಿ ವಿಜಿತ್ ಪುದುಕುಟ್ಟಿ ವಂದಿಸಿದರು.


