ಮುಳ್ಳೇರಿಯ: ಮುಳ್ಳೇರಿಯಾ ಮಂಡಲ ಚಂದ್ರಗಿರಿ ಹವ್ಯಕ ವಲಯ ಸಭೆಯು ಮುಳ್ಳೇರಿಯ ಮಂಡಲದ ಕೇಂದ್ರ ಕಛೇರಿಯಲ್ಲಿ ಇತ್ತೀಚೆಗೆ ಜರುಗಿತು.
ಘಟಕಾಧ್ಯಕ್ಷ ಅಂಬೆಮೂಲೆ ಶಿವರಾಮ ಭಟ್ ಧ್ವಜಾರೋಹಣಗೈದು ಚಾಲನೆ ನೀಡಿದರು. ವಲಯಾಧ್ಯಕ್ಷ ಅಮ್ಮಂಕಲ್ಲು ಬಾಲಕೃಷ್ಣ ಭಟ್ ಸ್ವಾಗತಿಸಿ, ಗತಸಭೆಯ ವರದಿ ನೀಡಿದರು.
ಬೆಂಗಳೂರು ಗಿರಿನಗರದಲ್ಲಿ ಜರಗುವ ಶ್ರೀ ಗುರುಗಳ ಚಾತುರ್ಮಾಸ್ಯ ಸಂದರ್ಭದಲ್ಲಿ ವಲಯದ ಬಿಕ್ಷಾ ಸೇವೆಯು ಸೆ. 11 ರಂದು ಜರಗಲಿರುವುದು. ವಲಯದ ಶಿಷ್ಯ ಬಾಂಧವರು ಹೆಚ್ಚಿನ ಸಂಖೈಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಯಿತು. ವಲಯದಿಂದ ಪ್ರತಿಭಾ ಪುರಸ್ಕಾರಕ್ಕೆ ಆರ್ಹರಾದ ವಿದ್ಯಾರ್ಥಿಗಳು ಮುಂಚಿತವಾಗಿ ತಮ್ಮ ಇರುವಿಕೆಯನ್ನು ಖಾತರಿಪಡಿಸುವಂತೆ ತಿಳಿಸಿದರು. ವಲಯ ಸೇವಾಪ್ರಧಾನರಾದ ಸುಬ್ರಹ್ಮಣ್ಯ ಭಟ್ ಮೀನಗದ್ದೆ ವಲಯ ಭಿಕ್ಷಾ ಕಾರ್ಯಕ್ರಮಕ್ಕೆ ತೆರಳುವವರಿಗೆ ವಾಹನ ವ್ಯವಸ್ಥೆಯ ಮಾಹಿತಿ ನೀಡಿದರು.
ವಲಯದ ಪ್ರತಿಯೊಬ್ಬ ಘಟಕಾಧ್ಯಕ್ಷರು ವ್ಯಾಸ ಮಂತ್ರಾಕ್ಷತೆ ವಿತರಣೆ ಮತ್ತು ಚಾತುರ್ಮಾಸ್ಯ ಸಂಗ್ರಹದ ವಿವರಗಳನ್ನು ಸಭೆಗೆ ನೀಡಿದರು.
ವಲಯ ವೈದಿಕ ಪ್ರಧಾನರಾದ ನರಸಿಂಹರಾಜ ಪಯ ಇವರು 38ನೇ ಪ್ರತಿರುದ್ರಪಾರಾಯಣ, ಕುಂಕುಂಕುಮಾರ್ಚನೆ, ಲಕ್ಷ್ಮೀನರಸಿಂಹಕರಾವಲಂಬನ ಸ್ತೋತ್ರ ಪಾರಾಯಣ ಜರುಗಿದ ಮಾಹಿತಿ ನೀಡಿದರು. ವಲಯ ಕೋಶಾಧಿಕಾರಿಗಳು ತಿಂಗಳ ಲೆಕ್ಕಪತ್ರಮಂಡಿಸಿದರು. ವಲಯ ಮುಷ್ಟೀ ಬಿಕ್ಷಾ ಪ್ರದಾನೆ ಸೌಮ್ಯ ಕೂಳೂರು ಮುಷ್ಟೀಭಿಕ್ಷಾ ಸಂಗ್ರಹದ ಮಾಹಿತಿ ನೀಡಿದರು.
ವಲಯದ ಪ್ರತಿಯೊಂದು ಘಟಕದಲ್ಲೂ ವಾಟ್ಸಪ್ ಗ್ರೂಪ್ ಗಳ ರಚನೆಯ ಆವಶ್ಯಕತೆಯನ್ನು ಮಂಡಲ ಮುಷ್ಟೀಭಿಕ್ಷಾ ಪ್ರಧಾನೆ ಗೀತಾ ಅನಘಾ ತಿಳಿಸಿದರು. ಬಳಿಕ ವಿಭಾಗವಾರು ವರದಿ ಮಂಡಿಸಲಾಯಿತು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.


