ಉಪ್ಪಳ: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಘಟಕದ ವತಿಯಿಂದ ಕಡಲ್ಕೊರೆತದಿಂದ ನಷ್ಟ ಸಂಭವಿಸಿದ ಸಂತ್ರಸ್ಥರಿಗೆ ಓಣಂ ಕಿಟ್ ವಿತರಣೆ ಸಮಾರಂಭವು ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಕೆ.ಐ. ಅಧ್ಯಕ್ಷತೆಯಲ್ಲಿ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಎಂ.ಅಶೋಕ್, ಕಮಲಾಕ್ಷ ಪಂಜ, ಯೂತ್ ವಿಂಗ್ ಜಿಲ್ಲಾ ಕಾರ್ಯದರ್ಶಿ ಜಬ್ಬಾರ್ ಉಪ್ಪಳ,ಗ್ರಾಮ ಪಂಚಾಯತಿ ಸದಸ್ಯೆ ಸುಜಾತ ಶೆಟ್ಟಿ, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳಾದ ಸತ್ಯನ್ ಸಿ ಉಪ್ಪಳ, ವಿಜಯ ರೈ, ಮಾಧವ ಟೈಲರ್, ಯೂತ್ ವಿಂಗ್ ಅಧ್ಯಕ್ಷ ರೈಶಾದ್ ಉಪ್ಪಳ, ವೆಲ್ಫೇರ್ ಕಾರ್ಯದರ್ಶಿ ಉಮೇಶ್ ಶೆಟ್ಟಿ ಮಾತನಾಡಿದರು. ಘಟಕದ ಉಪಾಧ್ಯಕ್ಷ ಎಂ.ಭಾಸ್ಕರ್ ಸ್ವಾಗತಿಸಿ, ಕೋಶಾಧಿಕಾರಿ ಅಬ್ದುಲ್ ಹನೀಫ್ ವಂದಿಸಿದರು.


