ಕುಂಬಳೆ: ಬಿಲ್ಲವ ಸೇವಾ ಸಂಘ,ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮತ್ತು ಮಹಿಳ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಶುಕ್ರವಾರ ನಾರಾಯಣ ಗುರು ಜಯಂತಿಯ ಅಂಗವಾಗಿ ಶೇಡಿಕಾವು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಆಟೋಟ ಸ್ಪರ್ಧಾ ವಿಜೇತರಿಗೆ ಮತ್ತು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಂಘ ಕುಂಬ್ಳೆ ಸಮಿತಿಯ ಅದ್ಯಕ್ಷ ನವೀನ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಬ್ರಾಣದ ಶಂಕರನಾರಾಯಣ ಕಡಮಣ್ಣಾಯ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಜಿಲ್ಲಾ ಬಿಲ್ಲವ ಸೇವಾ ಸಂಘಗಳ ಒಕ್ಕೂಟ ದ ಅಧ್ಯಕ್ಷ ಕೃಷ್ಣಪ್ಪ ದೇರಂಬಳ, ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ನಾಯಕ್, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿಯ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಬಿಲ್ಲವ ಸೇವಾ ಸಂಘ ಜಿಲ್ಲಾ ಸಮಿತಿಯ ಉಪಾಧ್ಯಕ್ಷ್ರ ಶಿವ ಕಾಸರಗೋಡು, ಬಿಲ್ಲವ ಸೇವಾ ಸಂಘ ಜಿಲ್ಲಾ ಸಮಿತಿಯ ಕಾರ್ಯದರ್ಶಿ ರವಿ ಕೊಟೆಕ್ಕಾರ್, ಬಿಲ್ಲವ ಸೇವಾ ಸಂಘ ಕಾಸರಗೋಡು ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಶೇಖರ, ನಿವೃತ್ತ ಮುಖ್ಯೋಪಾದ್ಯಾಯ ಅಶೋಕ್ ಮಾಸ್ತರ್ ಬಾಡೂರು,ನಿವೃತ್ತ ಉಪ ಪೋಲೀಸ್ ಅಧಿಕಾರಿ ಸೀನಪ್ಪ ಪೂಜಾರಿ ಮತ್ತು ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ಪ್ರಬಂಧಕ ನಾರಾಯಣ ಪೂಜಾರಿ ಮಾತನಾಡಿದರು. ಲಕ್ಷ್ಮಿ ಬಾಬು ಪೂಜಾರಿ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಪೂಜಾರಿ ಸ್ವಾಗತಿಸಿ, ಶೋಭಾ ರೊಹಿತ್ ಅಮಿನ್ ವಂದಿಸಿದರು.


