ಬದಿಯಡ್ಕ: ಮಿತಿಮೀರಿದ ರಾಸಾಯನಿಕ ವಸ್ತು ಬಳಕೆಯು ಪರಿಸರ ಹಾನಿಗೆ ಕಾರಣವಾಗುತ್ತದೆ. ಹವಾನಿಯಂತ್ರಕ, ಶೈತ್ಯಕಾರಕಗಳಲ್ಲಿನ ಕ್ಲೋರೋ ಫೆÇ್ಲೀರೋ ಕಾರ್ಬನ್ ಓಜೋನ್ ಪದರದ ಶಿಥಿಲತೆಗೆ ಕಾರಣವಾಗುವುದು. ಆಧುನಿಕ ಸೌಕರ್ಯಗಳ ಬಳಕೆಯಲ್ಲಿ ಎಚ್ಚರ ಅಗತ್ಯ ಎಂದು ಶಿಕ್ಷಕ ಪ್ರಮೋದ್ ಕುಮಾರ್ ಹೇಳಿದರು.
ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಓಜೋನ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿ ಭಾಗ್ಯಶ್ರೀ ದಿನಾಚರಣೆಯ ಬಗ್ಗೆ ಮಾತನಾಡಿದರು. ಮುಖ್ಯ ಶಿಕ್ಷಕ ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಓಜೋನ್ ಪದರದ ಬಗ್ಗೆ ವಿಶೇಷ ತರಗತಿ ನಡೆಸಲಾಯಿತು. ಶ್ರೀಧರ ಮಾಸ್ತರ್ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ವಂದಿಸಿದರು.

