ಕುಂಬಳೆ: ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯ ದಿನಾಚರಣೆ ಪ್ರಯುಕ್ತ ಅಕ್ಷರ ದೀಪ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಗ್ರಂಥಾಲಯದ ಧ್ವಜಾರೋಹಣ, ಸಂಜೆ ಪುಸ್ತಕ ಓದಿನ ಮಹತ್ವದ ಬಗ್ಗೆ ತಾಲೂಕು ಲ್ಯೆಬ್ರರಿ ಕೌನ್ಸಿಲ್‍ನ ಸದಸ್ಯ ಪಿ.ರಾಮಚಂದ್ರ ಭಟ್ ವಿಶೇಷ ಉಪನ್ಯಾಸ ನೀಡಿದರು. ಬಳಿಕ ಗ್ರಂಥಾಲಯದ ಸದಸ್ಯರು ಜೊತೆಸೇರಿ ದೀಪ ಬೆಳಗಿಸಿ ಅಕ್ಷರ ದೀಪ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷ ರವಿಲೋಚನ ಸಿ.ಎಚ್. ವಹಿಸಿದ್ದರು. ಗ್ರಂಥಾಲಯದ ಕಾರ್ಯದರ್ಶಿ ರವಿಚಂದ್ರ ಸ್ವಾಗತಿಸಿ, ವಂದಿಸಿದರು.


