ಉಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಸಪ್ತಾಹ ಎಂಬ ಆಶಯದೊಂದಿಗೆ ಭಾರತೀಯ ಜನತಾ ಯುವ ಮೋರ್ಚಾ ಪೈವಳಿಕೆ ಪಂಚಾಯತಿ ಸಮಿತಿ ವತಿಯಿಂದ ಪೈವಳಿಕೆ ಪಂಚಾಯತಿ ಲಾಲ್‍ಭಾಗ್‍ನಲ್ಲಿ ರೋಗಿಯೊಬ್ಬರಿಗೆ ಉಚಿತ ಮಂಚ ಕೊಡುಗೆ ನೀಡುವ ಮೂಲಕ ಸೇವಾ ವಾರಾಚರಣೆಗೆ ಚಾಲನೆ ನೀಡಲಾಯಿತು.
ಲಾಲ್‍ಭಾಗ್ ನಿವಾಸಿ ಬಾಬು ಆಚಾರ್ಯ ಅವರ ಧರ್ಮಪತ್ನಿ ವಾರಿಜಾ ಎಂಬವರು ಕಳೆದ ನಾಲ್ಕು ವರ್ಷಗಳಿಂದ ವಾತರೋಗ ಸಂಬಂಧಿ ಕಾಯಿಯಿಂದ ಬಳಲುತ್ತಿದ್ದಾರೆ.ಬಡತನದ ಬೇಗೆಯಲ್ಲಿ ಬಳಲುತ್ತಿರುವ ಇವರಿಗೆ ಯುವ ಮೋರ್ಚಾ ಸದಸ್ಯರು ಕೈಜೋಡಿಸಿ ಮಂಚವೊಂದನ್ನು ಹಸ್ತಾಂತರಿಸಿದರು. ನೇತಾರರಾದ ರವೀಶ ತಂತ್ರಿ ಕುಂಟಾರು ಅವರು ವಾರಿಜಾರಿಗೆ ಮಂಚ ಹಸ್ತಾಂತರಿಸಿದರು. ಈ ಸಂದರ್ಭ ಬಿಜೆಪಿ ಪೈವಳಿಕೆ ಪಂಚಾಯತಿ ಅಧ್ಯಕ್ಷ ಸದಾಶಿವ ಚೇರಾಲ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಯುವಮೋರ್ಚ ನೇತಾರರಾದ ಚಂದ್ರಕಾಂತ್ ಶೆಟ್ಟಿ, ಧನರಾಜ್ ಪ್ರತಾಪನಗರ, ಮನುಕುಮಾರ್, ಸಂತೋಷ್ ಬಾಯಾರು, ಧನುಷ್ ಬಾಯಾರು ಹಾಗೂ ಯುವಮೋರ್ಚ ಕಾರ್ಯಕರ್ತರು ಉಪಸ್ಥಿತರಿದ್ದರು.


