ಮಂಜೇಶ್ವರ: ಬಿಎಂಎಸ್ ಮಂಜೇಶ್ವರ ವಲಯ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಪೇಟೆಯಲ್ಲಿ ಸೋಮವಾರ ಸಂಜೆ ವಿಶ್ವಕರ್ಮ ಜಯಂತಿ-ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಹೊಸಂಗಡಿ ಪೇಟೆಯಲ್ಲಿ ಸಂಚರಿಸಿದ ಮೆರವಣಿಗೆ ಸಮಾರೋಪಗೊಂಡು ಬಳಿಕ ಸಾರ್ವಜನಿಕ ಸಭೆ ನಡೆಯಿತು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ನಾರಾಯಣ್ ಕೆ. ಸಭೆ ಉದ್ಘಾಟಿಸಿದರು. ಮಂಜೇಶ್ವರ ವಲಯ ಕಾರ್ಯದರ್ಶಿ ಕೃಷ್ಣ ಬೆಜ್ಜ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ವಲಯ ಉಪಾಧ್ಯಕ್ಷ ಹರೀಶ್ ಕುದ್ರೆಪ್ಪಾಡಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉಪಸ್ಥಿತರಿದ್ದು ಮಾತನಾಡಿದರು. ಬಿಎಂಎಸ್ ಮಂಜೇಶ್ವರ ವಲಯ ಜೊತೆ ಕಾರ್ಯದರ್ಶಿ ಚಂದ್ರಶೇಖರ ವರ್ಕಾಡಿ ಸ್ವಾಗತಿಸಿ, ಉಪಾಧ್ಯಕ್ಷ ಗೋಪಿನಾಥ ಮೊರತ್ತಣೆ ವಂದಿಸಿದರು. ಕಾರ್ಯದರ್ಶಿ ಕೃಷ್ಣ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.


