ಕುಂಬಳೆ: ಜ್ಞಾನದೀಪಂ ಆಟ್ರ್ಸ್ ಮತ್ತು ಕಲ್ಚರಲ್ ಫಾರಂ, ನೆಹರೂ ಯುವಕೇಂದ್ರ ಸುರಕ್ಷಾ ಯೋಜನೆ ಕಾಸರಗೋಡು ಹಾಗು ಜನಮೈತ್ರಿ ಪೋಲೀಸ್ ಕುಂಬಳೆ ಇದರ ಸಂಯುಕ್ತ ಆಶ್ರಯದಲ್ಲಿ ಕುಂಬಳೆ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ನಿಯಮದ ಕುರಿತು ಜನಜಾಗೃತಿ ನೀಡುವ ನಿಟ್ಟಿನಲ್ಲಿ ಮಂಗಳವಾರ ಕಾರ್ಯಕ್ರಮವನ್ನು ಅಯೋಜಿಸಲಾಯಿತು.
ಕಾರ್ಯಕ್ರಮವನ್ನು ಕುಂಬಳೆ ಪೋಲೀಸ್ ಠಾಣಾಧಿಕಾರಿ ಐ.ಪಿ. ರಾಜೀವನ್ ವಲಿಯವಳಪ್ಪಿಲ್ ನಿರ್ವಹಿಸಿದರು. ಜ್ಞಾನದೀಪಂ ಕಲ್ಚರಲ್ ಫಾರಂನ ಅಧ್ಯಕ್ಷ ಪ್ರಜ್ವಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಂಬಳೆ ಪೋಲೀಸ್ ಠಾಣಾ ಸಹ ಅಧಿಕಾರಿ ರತ್ನಾಕರ, ಎಎಸ್.ಐ. ವಿನೋದನ್, ಅಧ್ಯಾಪಕ ಸುರೇಶ್, ನೆಹರೂ ಯುವಕೇಂದ್ರ ಸುರಕ್ಷಾ ಯೋಜನೆಯ ಸಿಬ್ಬಂದಿ ನಾರಾಯಣ.ಪಿ ಪೆರಡಾಲ, ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಕೌನ್ಸಿಲರ್ ಅನಿಟ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಜ್ಞಾನದೀಪಂ ಆಟ್ರ್ಸ್ ಅಂಡ್ ಕಲ್ಚರಲ್ ಫಾರಂ ಕಾರ್ಯದರ್ಶಿ ದೀಪ್ತಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ವೈಶಾಖ್ ವಂದಿಸಿದರು. ಬಳಿಕ ನಡೆದ ಜಾಥವನ್ನು ರಾಜೀವನ್ ಉದ್ಘಾಟಿಸಿದರು. ಈ ಸಂದರ್ಭ ಟ್ರಾಫಿಕ್ ನಿಯಮದ ಕುರಿತು ಜನಜಾಗೃತಿ ಮೂಡಿಸಲು ಬೀದಿ ನಾಟಕವು ಜರಗಿತು.



