ಪೆರ್ಲ: ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ನಾಡ ಹಬ್ಬ ಓಣಂ ಹಾಗೂ ಬಾಲೋತ್ಸವ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಯಸ್. ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ. ಉದ್ಘಾಟಿಸಿದರು. ಸಭೆಯಲ್ಲಿ ಕುಟುಂಬಶ್ರೀ ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ ಕೆ, ಗ್ರಂಥಾಲಯ ಸಮಿತಿ ಸದಸ್ಯ ಬಾಬು ಸ್ವರ್ಗ, ಬಾಲಕೃಷ್ಣ ಆಚಾರ್ಯ, ಪಿ.ಯಸ್.ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಪಾಲಕಿ ಅನಿತಾ ಸ್ವಾಗತಿಸಿ, ಸಮಿತಿ ಸದಸ್ಯ ರವಿ ವಾಣೀನಗರ ವಂದಿಸಿದರು.
ಈ ಸಂದರ್ಭ ಹೈಸ್ಕೂಲ್ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಾಲೋತ್ಸವ- 2019 ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶ್ರೀನಿವಾಸ ಪೆರಿಕ್ಕಾನ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.



