HEALTH TIPS

ಓಣಂ ಹಬ್ಬ ಜಾತಿ ಮತ ಬೇಧಭಾವವಿಲ್ಲದೆ ಆಚರಿಸುವ ಹಬ್ಬ- ಶಾರದಾ ವೈ.

     ಪೆರ್ಲ: ಕೇರಳದ ನಾಡ ಹಬ್ಬವಾದ ಓಣಂ ಇಂದು ದೇಶ ವಿದೇಶಗಳಲ್ಲಿ ಆಚರಿಸಲ್ಪಡುತ್ತಿದೆ. ಬಡವ-ಶ್ರೀಮಂತ, ಜಾತಿ-ಮತಗಳ ತಾರತಮ್ಯವಿಲ್ಲದೆ ಓಣಂ ಹಬ್ಬ ಆಚರಿಸುತ್ತಾರೆ. ಇದಕ್ಕಾಗಿ ಸರ್ಕಾರ ರಿಯಾಯಿತಿಯ ಮೂಲಕ ಎಲ್ಲರೂ ಆಚರಿಸುವಂತೆ ಮಾಡಿದೆ. ಯುವ ಸಂಘಟನೆಗಳು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳ ಆಚರಣೆಯ ಮೂಲಕ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಂದೇ ಸೂರಿನಲ್ಲಿ ನಿಲ್ಲುವಂತೆ ಮಾಡಿದ ಮಾತೃಭೂಮಿ ಸಂಘಟನೆ ಇತರ  ಸಂಘಟನೆಗಳಿಗೆ ಮಾದರಿ. ಆಧುನಿಕ ಯುಗದಲ್ಲಿ ಒಬ್ಬನೊಬ್ಬರು ಪರಸ್ಪರ ಬೆಸೆಯಲು ಆಚರಣೆಗಳು ಸಹಕಾರಿ ಎಂದು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ ನುಡಿದರು.
    ಅವರು ಸ್ವರ್ಗದ ಮಾತೃಭೂಮಿ ಸಂಘಟನೆಯ ವತಿಯಿಂದ ನಡೆದ "ನಾಡ ಹಬ್ಬ ಓಣಂ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
   ಸಭೆಯ ಅಧ್ಯಕ್ಷತೆಯನ್ನು ಸ್ವರ್ಗ ಯಸ್.ಎ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ಸಚ್ಚಿದಾನಂದ ಯಸ್. ವಹಿಸಿದ್ದರು.ಅವರು ಈ ಸಂದರ್ಭ ಮಾತನಾಡಿ, ಹಬ್ಬಗಳ ಆಚರಣೆಗಳು ಮನಸ್ಸಿಗೆ ಪ್ರಪುಲ್ಲತೆ ನೀಡುತ್ತದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ನೆರವಾಗುತ್ತದೆ  ಎಂದು ಕರೆನೀಡಿದರು.
     ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಯುವ ಲೇಖಕಿ ಅಕ್ಷತಾ ರಾಜ್ ಪೆರ್ಲ ಮಾತನಾಡಿ, ಪ್ರತಿಯೊಂದು ಹಬ್ಬಗಳನ್ನು ಆಚರಿಸುವಾಗ ಹಬ್ಬಗಳ ಮಹತ್ವ ತಿಳಿದಿರಬೇಕು. ಬಹುಭಾಷಾ ಸಂಗಮ ಭೂಮಿಯಾದ ಇಲ್ಲಿ ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ. ಇದರಿಂದಾಗಿ ಜನರು ತಮ್ಮ ಆಚಾರ ,ಮಾತೃಭಾಷೆಗೆ ಕೊಡುವ ಗೌರವವನ್ನು ತಿಳಿಯಬಹುದು ಎಂದು ನುಡಿದರು.ಸಭೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ, ಮಾತೃಭೂಮಿ ಸಂಘಟನೆ ಅಧ್ಯಕ್ಷ ಸುಬ್ಬಣ್ಣ ಸಿ. ಯಚ್, ಸಲಹಾ ಸಮಿತಿಯ ಶ್ರೀನಿವಾಸ ಪೆರಿಕ್ಕಾನ ಉಪಸ್ಥಿತರಿದ್ದರು. ಸಂಘಟನೆಯ ಕಾರ್ಯದರ್ಶಿ ರವಿರಾಜ್ ಯಸ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಾಮಚಂದ್ರ ಎಂ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಶಿಕಲಾ ಕೆದಂಬಾಯಿಮೂಲೆ ಕಾರ್ಯಕ್ರಮ ನಿರೂಪಿಸಿದರು. ತೃಪ್ತಿ ಬೈರಡ್ಕ, ಇಂಚರ ಪಿ.ಯಸ್‍ಕಟ್ಟೆ , ನಮ್ರತಾ ಪೆರಿಕ್ಕಾನ ಪ್ರಾರ್ಥಿಸಿದರು.  ನವೀನ್ ಎಂ ಮೊಳಕ್ಕಾಲು ವಂದಿಸಿದರು.ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳಿಗೆ, ಶಾಲಾ ಮಕ್ಕಳಿಗೆ  ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಓಣಂ ವಿಶೇಷತೆಯನ್ನು ಸಾರುವ ಓಣಂ ಭೋಜನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries