ಮಂಜೇಶ್ವರ: ತುಳುನಾಡಿನ ಮಹತ್ವದ ಮಾಸಗಳಲ್ಲಿ ಒಂದಾದ ಸೋಣೆ ತಿಂಗಳಿನ ಆಚರಣೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ, ಹಿರಿಯರ ಆಚರಣೆಗಳ ವೈಜ್ಞಾನಿಕ ಅರ್ಥಗಳನ್ನು ತಿಳಿಸಪಡಿಸಬೇಕು. ಸಂಪ್ರದಾಯವನ್ನು ಉಳಿಸುವುದರೊಂದಿಗೆ ಹಿಂದುತ್ವವನ್ನು ಗಟ್ಟಿಗೊಳಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಅವರು ತಿಳಿಸಿದರು.
ಹೊಸಂಗಡಿಯ ಹಿಲ್‍ಸೈಡ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶ್ರೀನಾರಾಯಣಗುರು ಯುವ ವೇದಿಕೆ ಕಾಸರಗೋಡು ಇದರ 11ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮ ದಿನಾಚರಣೆ, ಸೋಣದ ಪರ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶ್ರೀನಾರಾಯಣಗುರು ಯುವ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಾವರ ಮಾಡ ಕ್ಷೇತ್ರದ ಅರ್ಚಕ ತಿಮ್ಮಪ್ಪ ಕಾಂಜ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಂತಾರಾಮ ಪೂಜಾರಿ ಪೊಸೋಟು ಗುರುಪೂಜೆ ನೆರವೇರಿಸಿದರು. ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಕಟ್ಟೆಮಾರ್, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ವಿಜಯ ಬ್ಯಾಂಕ್ ಮಂಜೇಶ್ವರ ಶಾಖಾ ಪ್ರಬಂಧಕಿ ಅಶ್ವಿನಿ, ಶ್ರೀಮಲರಾಯ, ಧೂಮಾವತಿ ಬಂಟ ಚಾರಿಟೇಬಲ್ ಟ್ರಸ್ಟ್ ಕಿನ್ಯ ಇದರ ಅಧ್ಯಕ್ಷ ಬಾಬು ಶಾಸ್ತಾ ಕಿನ್ಯ, ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ಬಿಲ್ಲವ ಒಕ್ಕೂಟ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ ಸುವರ್ಣ ವಿಟ್ಲ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್, ಬಿಲ್ಲವ ಸಂಘ ಕೊಲ್ಯ ಘಟಕದ ಅಧ್ಯಕ್ಷ ವೇಣುಗೋಪಾಲ ಕೊಲ್ಯ, ತಲಪಾಡಿ ಬಿಲ್ಲವ ಸೇವಾ ಸಮಾಜದ ನಾರಾಯಣ ಪೂಜಾರಿ, ಮಂಗಳೂರಿನ ಹೆಚ್ಚುವರಿ ತಹಶೀಲ್ದಾರ್ ಪುರುಷೋತ್ತಮ ಪೂಜಾರಿ ಚಿತ್ರಾಪುರ, ಶಂಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಕಳೆದ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ, ಆಯ್ದ 6 ಮಂದಿ ಬಡ ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಸೇವಾ ವಿಭಾಗದಲ್ಲಿ ಸಾಧನೆಗೈಯ್ಯುತ್ತಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಶಮಾನೋತ್ಸವದ ಅಂಗವಾಗಿ ಹೊರತಂದ ದೇಯ್ಯಿ ಸ್ಮರಣ ಸಂಚಿಕೆಯನನು ತಿಮ್ಮಪ್ಪ ಕಾಂಜ ಅವರು ಬಿಡುಗಡೆಗೊಳಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕೃಷ್ಣಪ್ಪ ಪೂಜಾರಿ ಬಡಾಜೆ ವಂದಿಸಿದರು. ಸಂಘಟನಾ ಕಾರ್ಯದರ್ಶಿ ರವಿ ಮುಡಿಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತುಳುನಾಡಿನ ವಿವಿಧ ಭಕ್ಷಭೋಜ್ಯಗಳ ಸೋಣೆದ ಅಟ್ಟಿಲ್ ಭೋಜನ ನಡೆಯಿತು.


