ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್ ಎಸ್ ಎಸ್ ಘಟಕ ಶಾಲೆಯ ಸರಳ ರೀತಿಯ ಓಣಂ ಆಚರಣೆಯ ಬಳಿಕ ಎಂಡೋಸಲ್ಫಾನ್ ಬಾಧಿತರಾದ ಹಾಗು ಆರೋಗ್ಯ ಸಮಸ್ಯೆ ಎದುರಿಸುವ ಮನೆಗೆ ಓಣಂ ಕಿಟ್ ವಿತರಸಿ ಮಾದರಿಯಾಗಿದೆ.
ನಿತ್ಯ ಉಪಯೋಗಿ ಸಾಮಾನುಗಳ ಕಿಟ್ ನ್ನು ಕಾಟುಕುಕ್ಕೆ ಸಮೀಪದ ಎಂಡೋಸಲ್ಫಾನ್ ಬಾಧಿತರಾದ ರಮೇಶ್ ಹಾಗು ಅನಾರೋಗ್ಯ ಪೀಡಿತರಾಗಿರುವ ಮೋನಪ್ಪ ಎಂಬವರ ಮನೆಗೆ ತೆರಳಿ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ವಿತರಿಸದರು. ಈ ಮೊದಲು ನಡೆದ ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಕಿಟ್ ನ್ನು ಯೋಜನಾಧಿಕಾರಿಗೆ ಹಸ್ತಾಂತರಿಸಿದರು. ಎನ್ ಎಸ್ ಎಸ್ ಯೋಜನಾಧಿಕಾರಿ ಮಹೇಶ ಏತಡ್ಕ, ಅಧ್ಯಾಪಕರಾದ ಸರಸ್ವತಿ ಪ್ರಸನ್ನ,ರಮಣಿ ಎಂ ಎಸ್,ವಾಣಿ.ಕೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



