ಕಾಸರಗೋಡು: ಭಾರತೀಯ ನ್ಯಾಯವಾದಿ ಪರಿಷತ್‍ನ ನೇತೃತ್ವದಲ್ಲಿ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಲಾಯರ್ಸ್ ರೀಜಿನಲ್ ಸ್ಟಡಿ ಕ್ಯಾಂಪ್ ಮತ್ತು ಅಪರಾಧಿ ಕಾನೂನು(ಕ್ರಿಮಿನಲ್ ಲಾ) ಮತ್ತು ನಾಗರಿಕ ಕಾನೂನು(ಸಿವಿಲ್ ಲಾ) ಕುರಿತಾಗಿ ಕಾನೂನು ಕಾರ್ಯಾಗಾರ ನಡೆಯಿತು.
ಕೇರಳ ಬಾರ್ ಕೌನ್ಸಿಲ್ ಮಾಜಿ ಕೋಶಾಧಿಕಾರಿ ನ್ಯಾಯವಾದಿ ಕೆ.ಕೆ.ಬಲರಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿಎಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಮಾಜಿ ರಾಜ್ಯ ಅಧ್ಯಕ್ಷ ನ್ಯಾಯವಾದಿ ಸಿ.ಕೆ.ಶ್ರೀನಿವಾಸನ್, ಮಾಜಿ ರಾಜ್ಯ ಉಪಾಧ್ಯಕ್ಷ ಸಿ.ಕೆ.ಶ್ರೀಕೃಷ್ಣ ಭಟ್ ಶುಭಹಾರೈಸಿದರು.
ಬಿಎಪಿ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ.ರವೀಂದ್ರನ್ ಸ್ವಾಗತಿಸಿ, ಬಿಎಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಕೆ.ಕರುಣಾಕರನ್ ವಂದಿಸಿದರು.