ಪೆರ್ಲ:ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ದಿ.ಶಂಕರಮೋಹನದಾಸ ಆಳ್ವ ದ್ವಿತೀಯ ಸಂಸ್ಮರಣೆ ಸಮಾರಂಭದಲ್ಲಿ 'ಕುಂಬಳೆ ಗಾಂಧಿ' ದಿ.ದೇವಪ್ಪ ಆಳ್ವ ಮತ್ತು ದಿ.ಶಂಕರಮೋಹನದಾಸ ಆಳ್ವರ ಸ್ಮರಣ ಸಂಚಿಕೆ 'ದೇವ ಶಂಕರ' ಪುಸ್ತಕ ಸಂಗ್ರಾಹಕ ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ವಾಸುದೇವ ಭಟ್ 'ಶಿವ ಪಡ್ರೆ' ಅವರನ್ನು ಗೌರವಿಸಲಾಯಿತು.
ದಿ.ಆಳ್ವ ಅವರ ಧರ್ಮ ಪತ್ನಿ ಕಮಲಾಕ್ಷಿ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಾಣಾಜೆ ಸುಬೋಧ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್, ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ಖ್ಯಾತ ಯಕ್ಷಗಾನ ಅರ್ಥಧಾರಿ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ, ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ,ಕಾಟುಕುಕ್ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿ.ಸಂಜೀವ ರೈ, ವಿದ್ಯಾ ಸಂಸ್ಥೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್, ರಾಮಕೃಷ್ಣ ಶಿವಪ್ರಸಾದ್ ಆಳ್ವ, ಲಕ್ಷ್ಮೀ ನಾರಾಯಣ ಶೆಟ್ಟಿ, ಕೃಷ್ಣಪ್ರಸಾದ ಭಂಡಾರಿ ಸಾಜ, ಕುಟುಂಬ ಸದಸ್ಯರು, ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಕೆ.ಪದ್ಮನಾಭ ಶೆಟ್ಟಿ, ಶಿಕ್ಷಕ ಎಚ್.ಲೋಕನಾಥ ಶೆಟ್ಟಿ, ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳಾದ ಚಾಕಟೆ ಗೋಪಾಲಕೃಷ್ಣ ಭಟ್, ಬಿ.ಎಸ್.ಗಾಂಭೀರ, ಪಡ್ಪು ಶಿವರಾಮ ಭಟ್, ವಿನೋಬ ಶೆಟ್ಟಿ ದಂಬೆಕ್ಕಾನ, ಸಂದೇಶ್ ರೈ ಕಟ್ಟತ್ತಾಡೆ ಮತ್ತಿತರರು ಉಪಸ್ಥಿತರಿದ್ದರು.


