ಬದಿಯಡ್ಕ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಬದಿಯಡ್ಕದಲ್ಲಿರುವ ಬಿಜೆಪಿ ಕಾಸರಗೋಡು ಮಂಡಲ ಸಮಿತಿಯ ಕಚೇರಿಯಲ್ಲಿ ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಪುಷ್ಪಾರ್ಚನೆ ನಡೆಸಿದರು. ಪ್ರಮುಖರಾದ ಹರೀಶ್ ಗೋಸಾಡ, ಮೈರ್ಕಳ ನಾರಾಯಣ ಭಟ್, ನ್ಯಾಯವಾದಿ ಗಣೇಶ್ ಬಿ., ಬಾಲಕೃಷ್ಣ ಶೆಟ್ಟಿ ಕಡಾರು ಹಾಗೂ ಕಾರ್ಯಕರ್ತರು ಪುಷ್ಪಾರ್ಚನೆಗೈದರು.