ಪೆರ್ಲ: ಇತ್ತೀಚೆಗೆ ಅಗಲಿದ ಹಿರಿಯ ವ್ಯಾಪಾರಿ, ಸಾಹಿತ್ಯಾಭಿಮಾನಿ ಪಾಂಡುರಂಗ ಶೆಣೈ ಪೆರ್ಲ ಅವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ ಪೆರ್ಲ ಗಣೇಶ ಮಂದಿರದಲ್ಲಿ ಸಾಹಿತ್ಯ-ಸಾಂಸ್ಕøತಿಕ ಸಂಘಟನೆ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ದಿ.ಪಾಂಡುರಂಗ ಶೆಣೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು, ಪಾಂಡುರಂಗ ಶೆಣೈ ಅವರು ಸುಧೀರ್ಘ ಕಾಲದಿಂದ ಸಾಹಿತ್ಯಾಸಕ್ತರಾಗಿ, ಪೋಷಕರಾಗಿ ತೊಡಗಿಸಿಕೊಂಡವರಾಗಿದ್ದರು. ತಮ್ಮ ಸಹೋದರ ಸಾಹಿತಿ ಹರೀಶ್ ಪೆರ್ಲ ಅವರ ಸಮಗ್ರ ಸಾಹಿತ್ಯ ಚಟುವಟಿಕೆಗಳ ಹಿಂದಿದ್ದ ಮಹಾನ್ ಶಕ್ತಿ ಶೆಣೈ ಅವರಾಗಿದ್ದರು ಎಂದು ತಿಳಿಸಿದರು. ತಮ್ಮ ಸ್ವಗೃಹದಲ್ಲಿ ಹಲವಾರು ಸಾಹಿತ್ಯ ಚಟುವಟಿಕೆಗಳಿಗೆ ವೇದಿಕೆಯೊದಗಿಸಿ ಅನೇಕ ಯುವ ಪ್ರತಿಭಾವಂತರಿಗೆ ಅವಕಾಸವೊದಗಿಸಿದ ಶೆಣೈ ಅವರ ಸಾಹಿತ್ಯಪರ ಚಿಂತನೆ ಅನುಸರಣೀಯವಾಗಿ ಸದಾ ಸ್ತುತ್ಯರ್ಹವಾದುದು ಎಂದು ಈ ಸಂದರ್ಭ ನೆನಪಿಸಿದರು.
ರಾಜಾರಾಮ ಶೆಟ್ಟಿ, ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಗಾಯಕ ವಸಂತ ಬಾರಡ್ಕ ಮೊದಲಾದವರು ನುಡಿನಮನ ಸಲ್ಲಿಸಿದರು. ವೇದಿಕೆಯ ಸದಸ್ಯೆ ನಿರ್ಮಲಾ ಸೇಸಪ್ಪ ಖಂಡಿಗೆ ಸ್ವಾಗತಿಸಿ, ರಿತೇಶ್ ಕಿರಣ್ ಕಾಟುಕುಕ್ಕೆ ವಂದಿಸಿದರು.


