ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಫ್ಲವರ್ಸ್ ಚಾನಲ್ ನಲ್ಲಿ ವೈವಿದ್ಯಮಯ ನೃತ್ಯ ಕಾರ್ಯಕ್ರಮದ ಮೂಲಕ ಜನಮನ ಸೆಳೆದ ನೃತ್ಯ ಪ್ರತಿಭೆ ರಿತೇಶ್ ಕೃಷ್ಣ ಬೆಳ್ಳೂರು ಉದ್ಘಾಟಿಸುವನು. ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಖಾಸಿಮ್, ಮುಖ್ಯೋಪಾಧ್ಯಾಯ ಬಾಲಕೃಷ್ಣ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೊಯ್ದು, ಶಾಲಿನಿ, ಶೆರೀಫ್, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ರೇಶ್ಮಾ ಸುನಿಲ್, ಜಯಲಕ್ಷ್ಮಿ ಮುಳ್ಳೇರಿಯ, ವಿದ್ಯಾಗಣೇಶ್ ಅಣಂಗೂರ್ ಉಪಸ್ಥಿತರಿರುವರು.ಸಂಧ್ಯಾಗೀತಾ ಬಾಯಾರು ತರಗತಿ ನಡೆಸುವರು.
ಚಿಣ್ಣರ ಕಲರವ ಉದ್ಘಾಟಿಸಲಿರುವ ಬಾಲ ಪ್ರತಿಭೆ ರತೀಶ್ ಕೃಷ್ಣ ಬೆಳ್ಳೂರು


