ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯ ಇದರ ನೇತೃತ್ವದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ಪಿ.ಎಲ್.ನಾರಾಯಣ ಮಾಸ್ತರರನ್ನು ಅವರ ಸ್ವಗೃಹದಲ್ಲಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್‍ರವರು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಂಥಾಲಯ ಅಧ್ಯಕ್ಷ ರಾಮಚಂದ್ರ.ಟಿ ಅವರು ವಹಿಸಿದ್ದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್.ಪಿ.ಕೆ, ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಶಾಮ್ ಭಟ್, ಮಂಜೇಶ್ವರ ತಾಲೂಕು ಜೊತೆ ಕಾರ್ಯದರ್ಶಿ ಡಿ.ಕಮಲಾಕ್ಷ, ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯ ಸದಸ್ಯ ಚಂದ್ರಶೇಖರ ಎಂ.ಐ.ಎಂ, ಬಾಬು ಎಂ, ಜನಾರ್ದನ ಬೇರಿಕೆ. ಪ್ರಕಾಶ ಬುಡ್ರಿಯ ಮೊದಲಾದವರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸತೀಶ ಸನ್ಮಾನ ಪತ್ರ ವಾಚಿಸಿದರು. ಗ್ರಂಥಾಲಯ ಕಾರ್ಯದರ್ಶಿ ಸುರೇಶ ಬಂಗೇರ ಸ್ವಾಗತಿಸಿ, ಗ್ರಂಥಪಾಲಿಕೆ ತುಳಸಿ ವಂದಿಸಿದರು.


