ಮಂಜೇಶ್ವರ: ಬೆಜ್ಜ ವಾಟರ್ ಶೆಡ್ಡ್ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ವಾಟರ್ ಶೆಡ್ ಪ್ರತಿನಿಧಿಗಳ ಪುನರವಲೋಕನ ಸಭೆ ಮೀಂಜ ಮಾರ್ಕೆಟ್ ಸಭಾಂಗಣದಲ್ಲಿ ಬೆಜ್ಜ ವಾಟರ್ ಶೆಡ್ ಅಧ್ಯಕ್ಷ ಸದಾನಂದ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಸಭೆಯನ್ನು ಮೀಂಜ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಕುಂಞ ಉದ್ಘಾಟಿಸಿದರು. ನಬಾರ್ಡ್ ವಲಯ ಪ್ರಬಂಧಕ(ಎ.ಡಿ.ಎಂ) ಜ್ಯೋತಿಸ್ ಕುಮಾರ್, ನೀಲೇಶ್ವರ ಆರ್.ಡಿ.ಒ ಪ್ರತಿನಿಧಿ ಡಿ.ಕೆ ನಾರಾಯಣ ಹಾಗೂ ವಿಮಲ ಉಪಸ್ಥಿತರಿದ್ದರು. ಮೀಂಜ ಗ್ರಾ.ಪಂ. ಸದಸ್ಯೆ ಕುಸುಮ ಮೋಹನ್ ಹಾಗೂ ಎಲ್ಲಾ ವಾಟರ್ ಶೆಡ್ಡ್‍ಗಳ ಪ್ರತಿನಿಧಿಗಳು ಹಾಗೂ ಬೆಜ್ಜ ವಾಟರ್ ಶೆಡ್‍ನ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಟಿ.ಡಿ.ಸದಾಶಿವ ರಾವ್ ಸ್ವಾಗತಿಸಿ, ಗಿರೀಶ್ ಶೆಟ್ಟಿ ವಂದಿಸಿದರು.


