ಮಂಜೇಶ್ವರ: ಕೇರಳ ರಾಜ್ಯ ಯುವ ಜನ ಕ್ಷೇಮ ಇಲಾಖೆಯ ಅಧೀನದಲ್ಲಿರುವ ಮೀಯಪದವು ಪ.ಜಾತಿ ಕಾಲನಿ ಯುವ ಕ್ಲಬ್ ಇದರ ಮಹಾಸಭೆಯು ಇತ್ತೀಚೆಗೆ ಮೀಯಪದವು ಮುಗೇರ ಸೇವಾ ಸಮಿತಿ ಕಛೇರಿಯಲ್ಲಿ ಜರಗಿತು.
ಕ್ಲಬ್ಬಿನ ನಿರ್ದೇಶಕ ಸಂಜೀವ ಅವರ ಅಧ್ಯಕ್ಷತೆಯಲ್ಲಿ ಮೀಂಜ ಗ್ರಾಮ ಪಂಚಾಯತಿ ಯುವ ಸಂಯೋಜಕ ಇಬ್ರಾಹಿಂ ಹೊನ್ನಕಟ್ಟೆ ಉದ್ಘಾಟಿಸಿದರು. ನೂತನ ಕಾರ್ಯ ಸಮಿತಿಗೆ ಅಧ್ಯಕ್ಷರಾಗಿ ಸಂದೀಪ್ ಪಳ್ಳತಡ್ಕ, ಉಪಾಧ್ಯಕ್ಷರಾಗಿ ಸರೋಜ ಕೆದುಪಡ್ಪು, ಕಾರ್ಯದರ್ಶಿಗಳಾಗಿ ಅಬಿಷೇಕ್ ಮೀಯಪದವು, ಜೊತೆ ಕಾರ್ಯದರ್ಶಿ ಅಭಿಜಿತ್ ಮೀಯಪದವು, ಅನಿತಾ ಮೀಯಪದವು ಕೋಶಾಧಿಕಾರಿಗಳಾಗಿ ಸತೀಶ ಪಳ್ಳತಡ್ಕ ಹಾಗೂ ಸದಸ್ಯರಾಗಿ ಗಣೇಶ, ಹರೀಶ್ ಕೃಷ್ಣಾನಂದ ರಮೇಶ, ಹರಿಕೃಷ್ಣ ಇವರುಗಳನ್ನು ಆಯ್ಕೆ ಮಾಡಲಾಯಿತು. ಸರೋಜ ಕೆದುಪಡ್ಪು ಸ್ವಾಗತಿಸಿ, ಸತೀಶ ಪಳ್ಳತಡ್ಕ ವಂದಿಸಿದರು.


