ಕಾಸರಗೋಡು: ಮುಂದಿನ ಭಾನುವಾರ ತನಕ ರಾಜ್ಯ ಸರಕಾರಿ ಕಚೇರಿಗಳಿಗೆ ರಜೆಯಾಗಿದೆ. ಸೆ.8 ಸಹಿತ ಸತತ 8 ದಿನಗಳ ರಜೆಯಾಗಿದೆ.
ಸೆ.8 ರಂದು ಸಾರ್ವಜನಿಕ ರಜೆಯಾಗಿದ್ದರೆ, ಸೆ.9 ರಂದು ಮೊಹರಂ, 10 ರಂದು ಪ್ರಥಮ ಓಣಂ, 11 ರಂದು ತಿರುವೋಣಂ, 12 ರಂದು ಮೂರನೇ ಓಣಂ, 13 ರಂದು ಶ್ರೀ ನಾರಾಯಣ ಗುರು ಜಯಂತಿ, 14 ರಂದು ದ್ವಿತೀಯ ಶನಿವಾರ ಮತ್ತು 15 ರಂದು ಸಾರ್ವತ್ರಿಕ ರಜೆಯಾಗಿದೆ. ಇದರಿಂದ ಒಟ್ಟು 8 ದಿನಗಳ ರಜೆಯಾಗಿದೆ.
ಬಿವರೇಜ್ ಕಾರ್ಪರೇಶನ್‍ನ ಮದ್ಯದಂಗಡಿಗಳಿಗೆ ಸೆ.11 ಮತ್ತು 13 ರಂದು ರಜೆಯಾಗಿದೆ. ಓಣಂ ಕಳೆದು ಶಾಲೆಗಳು ಸೆ.16 ರಂದು ಮತ್ತೆ ತೆರೆಯಲಿದೆ.

