ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯ ಶ್ರೀಆದಿಶಕ್ತಿ ಸ್ವಸಹಾಯ ಸಂಘದ ನೇತೃತ್ವದಲ್ಲಿ ಭಾನುವಾರ ಪುದುಕೋಳಿ ಪರಿಸರದಲ್ಲಿ ಶ್ರಮದಾನ ನಡೆಯಿತು.
ಸ್ವಸಹಾಯ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಪುದುಕೋಳಿ ಅವರ ನೇತೃತ್ವದಲ್ಲಿ ಪುದುಕೋಳಿ ಬಸ್ ನಿಲ್ದಾಣ ಪರಿಸರದಿಂದ ಅಂಗನವಾಡಿ ಪರಿಸರದ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಕಾಡುಪೊದೆಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು. ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಂಚರಿಸಲು ತೊಡಕಾಗುವಂತೆ ಬೆಳೆದುನಿಂತಿದ್ದ ಪೊದೆಗಳನ್ನು ಈ ಸಂದರ್ಭ ತೆರವುಗೊಳಿಸಲಾಯಿತು.
ಸ್ವಸಹಾಯ ಸಂಘದ ಉಪಾಧ್ಯಕ್ಷ ಗಂಗಾಧರ ಕೆ.ಪಿ, ಕಾರ್ಯದರ್ಶಿ ಗಂಗಾಧರ ಕೆ., ಖಜಾಂಜಿ ವಾಮನ ನಾಯ್ಕ್ ಪುದುಕೋಳಿ, ಸದಸ್ಯರುಗಳಾದ ಸುಬ್ಬ ನಾಯ್ಕ್, ಕೃಷ್ಣ ನಾಯ್ಕ್ ಪುದುಕೋಳಿ, ಐತ್ತಪ್ಪ ನಾಯ್ಕ್ ಪುದುಕೋಳಿ, ಪುರುಷೋತ್ತಮ ನಾಯ್ಕ್, ಮುರಳೀಕೃಷ್ಣ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.



