ಮುಳ್ಳೇರಿಯ: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಓಣಂ ಹಬ್ಬಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು ರಾಜ್ಯ ನೆರೆ ಪರಿಹಾರ ನಿಧಿಗೆ ಸಂಗ್ರಹಿಸಿದ ಮೊತ್ತವನ್ನು ಮಾವೇಲಿ(ಮಹಾಬಲಿ) ವೇಶಧರಿಸಿದ ರಾಮ್ ಹಾಗೂ ಸಹಪಾಠಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉದುಮ ಶಾಸಕ ಕೆ.ಕುಂಞÂರಾಮನ್ ಅವರಿಗೆ ಹಸ್ತಾಂತರಿಸಿ ಗಮನ ಸೆಳೆದರು.
ಕಾರಡ್ಕ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಸಿ.ಕೆ.ಕುಮಾರನ್, ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಎ.ಚಂದ್ರಶೇಖರನ್, ದೇಲಂಪಾಡಿ ಗ್ರಾ.ಪಂ.ಸದಸ್ಯ ಕಮಲಾಕ್ಷ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೆ.ಹರೀಶ್, ಪ್ರಾಂಶುಪಾಲ ಪಿ.ಲಕ್ಷ್ಮಣನ್, ಮುಖ್ಯೋಪಾಧ್ಯಾಯ ಅನೀಸ್ ಜಿ.ಮೂಸಾನ್, ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಎ.ಕೆ.ಮುಹಮ್ಮದ್ ಹಾಜಿ, ಮಾತೃಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಶಾಲಾ ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಮಣಿಯಾಣಿ, ಹಿರಿಯ ಶಿಕ್ಷಕಿ ಪಿ.ಶಾರದಾ ಮೊದಲಾದವರು ಉಪಸ್ಥಿತರಿದ್ದರು.

