ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತೆಂಕುತಿಟ್ಟಿನ ಅರುವತ್ತಕ್ಕೂ ಮಿಕ್ಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸೆ.6 ರಂದು `ಆತ್ಮಾನಂ ಮಾನುಷಂ ಮನ್ಯೇ' ಹಾಗೂ 7 ರಂದು `ಮಹಾ ಪ್ರಸ್ಥಾನ' ಯಕ್ಷಗಾನ ಪ್ರದರ್ಶನ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಯಶಸ್ವಿಯಾಗಿ ಜರಗಿ ಪ್ರೇಕ್ಷಕರನ್ನು ರಂಜಿಸಿತು.
ರಾಜ್ಯದಾದ್ಯಂತ ಕಲಾಪ್ರೇಮಿಗಳು ಪೂರ್ಣಸಹಕಾರ ನೀಡಿದ್ದು ಐವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಪ್ರದರ್ಶನಕ್ಕಾಗಿ ಜೊತೆಗೂಡಿ ಶ್ರಮಿಸಿದ್ದರು. ಪ್ರದರ್ಶನದ ಅಂಗವಾಗಿ ಬೆಂಗಳೂರು ನಗರದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಎಸ್.ಎಸ್.ಎನ್.ಎಂ.ಸಿ. ಆಸ್ಪತ್ರೆ ವತಿಯಿಂದ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಉಚಿತ ವೈದ್ಯಕೀಯ ತಪಾಸಣೆ ಜರಗಿತು ಹಾಗೂ ಮುಳಿಯ ಜುವೆಲ್ಲರೀಸ್ ವತಿಯಿಂದ ಲಕ್ಕೀ ಕೂಪನ್ ವಿಜೇತರಿಗೆ ಚಿನ್ನದ ನಾಣ್ಯ ಬಹುಮಾನ ನೀಡಲಾಯಿತು.
ಕಾಸರಗೋಡಿನ ಸಿರಿಬಾಗಿಲಿನಲ್ಲಿ ನಾಡಿನ ಹಿರಿಯ ಸಂಶೋಧಕ ಲೇಖಕ ಸಿರಿಬಾಗಿಲು ವೆಂಕಪ್ಪಯ್ಯ ಅವರ ಹೆಸರಿನಲ್ಲಿ ಸುಮಾರು 2ಕೋಟಿ ಖರ್ಚುವೆಚ್ಚದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಭವನ ನಿರ್ಮಾಣಗೊಳ್ಳಲಿದ್ದು ಯಕ್ಷಗಾನ ಪ್ರದರ್ಶನದಿಂದ ಬರುವ ಮೊತ್ತವನ್ನು ಭವನ ನಿರ್ಮಾಣಕ್ಕೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಯಕ್ಷಗಾನ ಪ್ರದರ್ಶನ ಸಂದರ್ಭ ಯಕ್ಷಗಾನ ಪ್ರೇಮಿಗಳು 10 ಲಕ್ಷ ರೂ. ಮೊತ್ತವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಭವನಕ್ಕೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ತಿಳಿಸಿದ್ದಾರೆ.


