ಮಂಜೇಶ್ವರ: ಬಾಕ್ರಬೈಲ್ ಹಾರ್ವರ್ ನಿವಾಸಿ ಬಿಜೆಪಿ ಕಾರ್ಯಕರ್ತ ಶಂಕರ್ ಅವರ ಮನೆಯ ಮೇಲೆ ಭೂ ಕುಸಿತದಿಂದ ಉಂಟಾದ ಅನಾಹುತವನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಭೇಟಿ ನೀಡಿ ಅವಲೋಕಿಸಿದರು. ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಆದರ್ಶ್ ಬಿ.ಎಂ, ಚಂದ್ರಶೇಖರ್ ಶೆಟ್ಟಿ, ಜಗದೀಶ್ ಚೆಂಡೆಲ್, ದೂಮಪ್ಪ ಶೆಟ್ಟಿ, ಪ್ರಶಾಂತ್ ಮೊದಲಾದವರು ಜೊತೆಗಿದ್ದರು.